ಎ. 11: ಅಮೆರಿಕ ಸಂಸತ್ತಿನಲ್ಲಿ ಹಾಜರಾಗುವ ಝುಕರ್‌ಬರ್ಗ್

Update: 2018-04-04 15:58 GMT

ವಾಶಿಂಗ್ಟನ್, ಎ. 4: ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಎಪ್ರಿಲ್ 11ರಂದು ಅಮೆರಿಕದ ಸಂಸತ್ತಿನ ಇಂಧನ ಮತ್ತು ವಾಣಿಜ್ಯ ಸಮಿತಿಯ ಸಮ್ಮುಖದಲ್ಲಿ ಹಾಜರಾಗಿ ಮಾಹಿತಿ ಸೋರಿಕೆಯ ಬಗ್ಗೆ ವಿವರಣೆ ನೀಡಲಿದ್ದಾರೆ.

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಕೆಲಸ ಮಾಡಿದ್ದ ಬ್ರಿಟನ್‌ನ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ, 5 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿತ್ತು ಎಂಬ ವಿಷಯ ಬಹಿರಂಗಗೊಂಡ ಬಳಿಕ, ಫೇಸ್‌ಬುಕ್ ಜಗತ್ತಿನಾದ್ಯಂತ ಟೀಕೆಗಳನ್ನು ಎದುರಿಸುತ್ತಿದೆ.

 ಝುಕರ್‌ಬರ್ಗ್ ಸಂಸತ್ತಿನಲ್ಲಿ ಹಾಜರಾಗುವ ವಿಷಯವನ್ನು ಸಮಿತಿಯ ಅಧ್ಯಕ್ಷ ಗ್ರೆಗ್ ವಾಲ್ಡನ್ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News