ಬೆಂಗಳೂರು: ರಿವಾಲ್ವಾರ್ ಮರಳಿಸಿದ ಆಟೊಚಾಲಕನಿಗೆ ಬಹುಮಾನ

Update: 2018-04-04 18:16 GMT

ಬೆಂಗಳೂರು, ಎ.4: ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೇದೆ ಕಳೆದುಕೊಂಡಿದ್ದ ಸರ್ವೀಸ್ ರಿವಾಲ್ವರ್‌ನ್ನು ಇಲಾಖೆಗೆ ಮರಳಿಸಿದ ಆಟೊ ಚಾಲಕನಿಗೆ ಆಂತರಿಕ ಭದ್ರತಾ ದಳದ ಎಡಿಜಿಪಿ ಪ್ರತಾಪ್ ರೆಡ್ಡಿ 10 ಸಾವಿರ ರೂ.ನದು ಬಹುಮಾನ ನೀಡಿ ಗೌರವಿಸಿದ್ದಾರೆ.

ಫೈಜುಲ್ಲಾ ಬೇಗ್ ರಿಲ್ವಾರ್ ಮರಳಿಸಿದ ಆಟೊಚಾಲಕ. ಕೆಎಸ್‌ಐಎಸ್‌ಎಫ್‌ನ ಪೇದೆ ಮಾ.25ರಂದು ಬೆಳಗ್ಗೆ ಕೆಲಸಕ್ಕೆ ತೆರಳುವ ವೇಳೆ ಮಲ್ಲೇಶ್ವರದಲ್ಲಿ ತಮ್ಮ ಸರ್ವೀಸ್ ರಿವಾಲ್ವರ್ ಕಳೆದುಕೊಂಡಿದ್ದರು. ಆತಂಕಗೊಂಡಿದ್ದ ಪೇದೆ ಪ್ರಧಾನ ಕಚೇರಿಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದರು. ಮಲ್ಲೇಶ್ವರದ ಎಂ.ಡಿ. ಬ್ಲಾಕ್‌ನಲ್ಲಿ ಬಾಡಿಗೆಗಾಗಿ ಓಡಾಡುತ್ತಿದ್ದ ಆಟೊಚಾಲಕ ಫೈಜುಲ್ಲಾ ಬೇಗ್‌ನಿಗೆ ರಿವಾಲ್ವರ್ ಸಿಕ್ಕಿದೆ. ಕೂಡಲೇ ಮಲ್ಲೇಶ್ವರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾನೆ.

ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಕೆಎಸ್‌ಐಎಸ್‌ಎಫ್‌ನ ಪೇದೆ ಆಕಸ್ಮಿಕವಾಗಿ ಸರ್ವೀಸ್ ರಿವಾಲ್ವರ್ ಕಳೆದುಕೊಂಡಿರುವ ಬಗ್ಗೆ ಗೊತ್ತಾಗಿ, ಪ್ರಧಾನ ಕಚೇರಿ ವಶಕ್ಕೆ ಒಪ್ಪಿಸಿದ್ದಾರೆ.

ಆಟೊಚಾಲಕ ಫೈಜುಲ್ಲಾ ಬೇಗ್‌ನ ಸಾಮಾಜಿಕ ಪ್ರಜ್ಞೆಯನ್ನು ಅಭಿನಂದಿಸಿರುವ ಆಂತರಿಕ ಭದ್ರತಾ ದಳದ ಎಡಿಜಿಪಿ ಪ್ರತಾಪ್ ರೆಡ್ಡಿ ಇಂತಹ ಜವಾಬ್ದಾರಿಯುತ ಪ್ರಜೆಗಳ ಸಂಖ್ಯೆ ಹೆಚ್ಚಾಗಲಿ ಎಂದು ಟ್ವಿಟರ್‌ನಲ್ಲಿ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News