ಸೌದಿಯಲ್ಲಿ ಮೊದಲ ಸಿನೆಮಾ ಮಂದಿರ ಎ.18ಕ್ಕೆ ಆರಂಭ

Update: 2018-04-06 10:43 GMT

ಜಿದ್ದ,ಎ.5: ಸೌದಿ ಅರೇಬಿಯದ ಪ್ರಥಮ ಸಿನೆಮಾ ಥಿಯೇಟರ್ ಎ.18ಕ್ಕೆ ಆರಂಭಗೊಳ್ಳಲಿದ್ದು, ರಿಯಾದ್‍ನಲ್ಲಿ ಮೊದಲ ಥಿಯೇಟರ್ ಉದ್ಘಾಟನೆಗೊಳ್ಳಲಿದೆ ಎನ್ನಲಾಗಿದೆ. 

ಅಮೆರಿಕದಲ್ಲಿರುವ ಯುವರಾಜ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಲಾಸ್ ಏಂಜಲೀಸ್‍ನಲ್ಲಿ ಅಮೆರಿಕದ ಮಲ್ಟಿ ಸಿನೆಮಾ(ಎಎಂಸಿ) ಕಂಪೆನಿಯೊಂದಿಗೆ ಒಪ್ಪಂದಕ್ಕೆ ಸಹಿಹಾಕಿದ ನಂತರ ಸಿನೆಮಾ ಥಿಯೇಟರ್ ಆರಂಭವಾಗುವ ದಿನಾಂಕವನ್ನು ಘೋಷಿಸಲಾಗಿದೆ. 

ಸೌದಿ ಅರೇಬಿಯದಲ್ಲಿ ಹದಿನೈದು ನಗರಗಳಲ್ಲಿ 40 ಥಿಯೇಟರ್ ಆರಂಭಿಸಲು ಎಎಂಸಿಯೊಂದಿಗೆ ಒಪ್ಪಂದಕ್ಕೆ ಬರಲಾಗಿದೆ. ಎಎಂಸಿ ಸೌದಿ ಜನರಲ್ ಎಂಟರ್ ಟೈನ್ ಮೆಂಟ್ ಅಥಾರಿಟಿಯಿಂದ ಲೈಸೆನ್ಸ್ ಪಡೆದ ಮೊದಲ ಕಂಪೆನಿ ಎನಿಸಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News