ಪಾಕ್ ಪೊಲೀಸರಿಗೆ ಅಟ್ಟಾಡಿಸಿ ಹೊಡೆದ ಚೀನೀಯರು

Update: 2018-04-06 17:41 GMT

ಇಸ್ಲಾಮಾಬಾದ್, ಎ. 6: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಕಾರ್ಯಕ್ಷೇತ್ರವೊಂದರಲ್ಲಿ ಚೀನೀಯರು ಮತ್ತು ಪಾಕಿಸ್ತಾನಿ ಪೊಲೀಸರ ನಡುವೆ ಮಾರಾಮಾರಿ ನಡೆಯುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಎಲ್ಲರೂ ಸಾಮೂಹಿಕವಾಗಿ ಹೊಡೆದಾಡಿಕೊಳ್ಳುವ ಘಟನೆಯು ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತದ ಖಾನೇವಾಲ್‌ನಲ್ಲಿ ನಡೆದಿದೆ.

ಚೀನೀಯರು ಪಾಕಿಸ್ತಾನಿ ಪೊಲೀಸರಿಗೆ ಹೊಡೆಯುವುದನ್ನು ಹಾಗೂ ಪೊಲೀಸರು ರಕ್ಷಣೆಗಾಗಿ ಓಡುವುದನ್ನು ವೀಡಿಯೊ ತೋರಿಸುತ್ತದೆ.

ತಮ್ಮನ್ನು ಶಿಬಿರದಿಂದ ಹೊರಗೆ ಹೋಗಲು ಬಿಡದ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಚೀನೀಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಹಲ್ಲೆಗೈದ ಚೀನೀಯರ ಪೈಕಿ ಹೆಚ್ಚಿನವರು ಎಂಜಿನಿಯರ್‌ಗಳಾಗಿದ್ದಾರೆ. ಅವರು ಆರ್ಥಿಕ ಕಾರಿಡಾರ್‌ನ ಭಾಗವಾಗಿರುವ ರಸ್ತೆಯೊಂದರ ನಿರ್ಮಾಣದಲ್ಲಿ ತೊಡಗಿದ್ದಾರೆ.

ಬುಧವಾರದ ಘರ್ಷಣೆಗೆ ಚೀನೀ ರಾಷ್ಟ್ರೀಯರು ಕಾರಣ ಎಂಬ ನಿರ್ಧಾರಕ್ಕೆ ತಾನು ಬಂದಿದ್ದೇನೆ ಎಂದು ಘಟನೆಯ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಅಧಿಕಾರಿ ರಿಝ್ವೆನ್ ಉಮರ್ ಗೊಂಡಲ್ ಹೇಳಿದ್ದಾರೆ.

ವಿದೇಶಿ ನಿರ್ಮಾಣ ಕಂಪೆನಿಯ ‘ದೇಶಿ ಪ್ರಾಜೆಕ್ಟ್ ಮ್ಯಾನೇಜರ್’ ಸೇರಿದಂತೆ ಐವರು ಚೀನಿ ಅಧಿಕಾರಿಗಳನ್ನು ಗಡಿಪಾರು ಮಾಡಲು ಅವರು ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News