ಭಗತ್ ಸಿಂಗ್‌ರಿಂದ ಬಾಂಬ್ ಎಸೆತ

Update: 2018-04-07 18:40 GMT

1759: ಫ್ರಾನ್ಸಿಸ್ ಫೋರ್ಡ್ ನೇತೃತ್ವದ ಬ್ರಿಟಿಷ್ ಸೈನ್ಯವು ಫ್ರೆಂಚ್ ಸೈನ್ಯವನ್ನು ಸೋಲಿಸುವ ಮೂಲಕ ಭಾರತದ ಮಚಲೀಪಟ್ಟಣವನ್ನು ವಶಪಡಿಸಿಕೊಂಡಿತು.

1898: ಅತ್ಬಾರಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ಆಂಗ್ಲೋ-ಈಜಿಪ್ಟ್ ಜಂಟಿ ಸೈನ್ಯವು 6,000 ಸುಡಾನ್ ಸೈನಿಕರನ್ನು ಹತ್ಯೆಗೈಯಿತು.

1929: ಭಗತ್‌ಸಿಂಗ್ ಹಾಗೂ ಆತನ ಸಂಗಾತಿ ಕ್ರಾಂತಿಕಾರಿ ಬಟುಕೇಶ್ವರ ದತ್ತ ದಿಲ್ಲಿ ಕೇಂದ್ರ ಸದನದ ಕೋರ್ಟ್ ಭವನದಲ್ಲಿ ಬಾಂಬ್ ಎಸೆದು ಬ್ರಿಟಿಷರಿಂದ ಬಂಧನಕ್ಕೊಳಗಾದರು. ಭಾರತದ ಸ್ವಾತಂತ್ರ ಆಂದೋಲನ ಕಿವುಡ ಬ್ರಿಟಿಷ್ ಸರಕಾರಕ್ಕೆ ಕೇಳಲಿ ಎಂಬ ಉದ್ದೇಶದಿಂದ ಈ ಬಾಂಬ್ ಎಸೆಯಲಾಗಿದೆ ಎಂದು ಭಗತ್‌ಸಿಂಗ್ ಆನಂತರ ಸ್ಪಷ್ಟಪಡಿಸಿದರು. ಯಾವುದೇ ಜೀವಗಳಿಗೆ ಹಾನಿ ಮಾಡುವ ಉದ್ದೇಶ ತಮ್ಮದಾಗಿರಲಿಲ್ಲ ಎಂದೂ ಅವರು ಈ ಸಂದರ್ಭ ಹೇಳಿದ್ದರು.

1946: ರಾಷ್ಟ್ರಸಂಘದ ಕೊನೆಯ ಅಧಿವೇಶನ ಇಂದು ನಡೆಯಿತು.

1985: ಭೋಪಾಲ್ ಅನಿಲ ದುರಂತದ ಹಿನ್ನೆಲೆಯಲ್ಲಿ ಯೂನಿಯನ್ ಕಾರ್ಬೈಡ್ ಕಂಪೆನಿ ವಿರುದ್ಧ ಭಾರತ ಸರಕಾರ ಮೊಕದ್ದಮೆ ಹೂಡಿತು. ಅನಿಲ ಸೋರಿಕೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡ ಪ್ರಕರಣ ಇದಾಗಿದ್ದು, ದೀರ್ಘಕಾಲದಿಂದ ವಿಚಾರಣೆ ನಡೆಯುತ್ತಿದೆ.

1990: ನಾರ್ವೆಗೆ ಸೇರಿದ ಸ್ಕಾಂಡಿನೇವಿಯನ್ ಸ್ಟಾರ್ ಎಂಬ ಹಡಗಿಗೆ ಬೆಂಕಿ ಬಿದ್ದ ಪರಿಣಾಮ 159 ಜನ ಸಾವಿಗೀಡಾದ ವರದಿಯಾಗಿದೆ. 2010: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ರಶ್ಯಾದ ಅಧ್ಯಕ್ಷ ಡಿಮಿಟ್ರಿ ಮಿಡ್ವಡೇವ್ ಪರಮಾಣು ಶಸ್ತ್ರಾಸ್ತ್ರ ಒಪ್ಪಂದಕ್ಕೆ ಝೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ಸಹಿ ಹಾಕಿದರು.

2013: ಸುಡಾನ್‌ನ ಡಾರ್ಫರ್‌ನಲ್ಲಿ ಬುಡಕಟ್ಟು ಸಮುದಾಯಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 163 ಜನ ಮೃತಪಟ್ಟು, 50,000 ಜನ ನಿರಾಶ್ರಿತರಾದರು.

1894: ವಂದೇ ಮಾತರಂ ಗೀತೆ ರಚಿಸಿದ ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನ.

1974: ಜಗದ್ವಿಖ್ಯಾತ ಚಿತ್ರಕಾರ ಪ್ಯಾಬ್ಲೊ ಪಿಕಾಸೋ ಫ್ರಾನ್ಸ್‌ನಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ