ಬಾಕ್ಸಿಂಗ್: ಸರಿತಾದೇವಿ, ಮನೋಜ್ ಕ್ವಾರ್ಟರ್‌ ಫೈನಲ್‌ಗೆ

Update: 2018-04-07 19:34 GMT

ಭಾರತದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಹಿರಿಯ ಬಾಕ್ಸರ್‌ಗಳಾದ ಎಲ್.ಸರಿತಾದೇವಿ(60ಕೆಜಿ) ಹಾಗೂ ಮನೋಜ್‌ಕುಮಾರ್(59ಕೆಜಿ) ಅವರು ಚೊಚ್ಚಲ ಗೇಮ್ಸ್ ಆಡುತ್ತಿರುವ ಮುಹಮ್ಮದ್ ಹುಸ್ಸಾಮುದ್ದೀನ್(56ಕೆಜಿ)ಜೊತೆಗೂಡಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದ ಗ್ಲಾಸ್ಗೊ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಬಾಕ್ಸಿಂಗ್ ಸ್ಟಾರ್ ಸರಿತಾ ದೇವಿ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಬಾರ್ಬಡೋಸ್‌ನ ಕಿಂಬರ್ಲಿ ಗಿಟ್ಟೆನ್ಸ್ ವಿರುದ್ಧ 30-25 ಅಂತರದಿಂದ ಜಯ ದಾಖಲಿಸಿದರು.

 ಪುರುಷರ ವಿಭಾಗದಲ್ಲಿ ಮನೋಜ್ ತಾಂಜಾನಿಯದ ಕಸ್ಸಿಮ್ ಬಂಡ್ವಿಕ್ ವಿರುದ್ಧ ಒಮ್ಮತದ ಗೆಲುವು ದಾಖಲಿಸಿದರು. 31ರ ಹರೆಯದ ಮನೋಜ್ 2010ರ ದಿಲ್ಲಿ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಸ್ವಿಮ್ಮಿಂಗ್: ಭಾರತದ ಈಜುಪಟು ಶ್ರೀಹರಿ ನಟರಾಜ್ ಪುರುಷರ 50 ಮೀ.ಬ್ಯಾಕ್‌ಸ್ಟ್ರೋಕ್‌ನ ಮೊದಲ ಹೀಟ್‌ನಲ್ಲಿ ಮೂರನೇ ಸ್ಥಾನ ಪಡೆದು ಮುಂದಿನ ಹಂತ ತಲುಪಿದ್ದಾರೆ.

ಇದೇ ವೇಳೆ ಪುರುಷರ 200 ಮೀ. ಬಟರ್‌ಫ್ಲೈನಲ್ಲಿ 1:58.87 ಸೆಕೆಂಡ್‌ನಲ್ಲಿ ಗುರಿ ತಲುಪಿದ ಸಾಜನ್ ಪ್ರಕಾಶ್ ತನ್ನದೇ ರಾಷ್ಟ್ರೀಯ ದಾಖಲೆ(1:59.10)ಉತ್ತಮಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News