ಪಾಕ್‌ಗೆ ವಾಪಸಾಗುವ ಯೋಚನೆ ಮುಂದೂಡಿದ ಮುಶರ್ರಫ್

Update: 2018-04-08 17:51 GMT

 ಕರಾಚಿ, ಎ.8: ಸ್ವದೇಶಕ್ಕೆ ಮರಳುವ ತನ್ನ ಯೋಜನೆಯನ್ನು ಮುಂದೂಡಿರುವುದಾಗಿ ಪಾಕಿಸ್ತಾನದ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್ ರವಿವಾರ ತಿಳಿಸಿದ್ದಾರೆ. ಪಾಕ್‌ನಲ್ಲಿ ಮಧ್ಯಂತರ ಸರಕಾರ ರಚನೆಯಾಗುವವರೆಗೂ ತಾನು ವಾಪಸಾಗಲಾರೆನೆಂದು ಅವರು ಹೇಳಿದ್ದಾರೆ.

ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯೆದುರಿಸಲು ತನ್ನ ಮುಂದೆ ಹಾಜರಾಗುವಂತೆ ಮುಶರ್ರಫ್ ಅವರನ್ನು ಪಾಕಿಸ್ತಾನದ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಪ್ರಸ್ತುತ ಮುಶರ್ರಫ್ ಅವರು ಯುಎಇನಲ್ಲಿ ನೆಲೆಸಿದ್ದಾರೆ.

 ಪಾಕಿಸ್ತಾನದ ಹಾಲಿ ಸರಕಾರ ತನಗೆ ಸೂಕ್ತ ಭದ್ರತೆಯನ್ನು ಒದಗಿಸಲಾರದ ಕಾರಣ ತಾನು ಸ್ವದೇಶಕ್ಕೆ ಹಿಂತಿರುಗುವ ತನ್ನ ಯೋಜನೆಯನ್ನು ಮುಂದೂಡಿರುವುದಾಗಿ ಮುಶರ್ರಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News