ರಿಯಾದ್‌: 'ಅಡ್ಡೂರು ಸೆಂಟ್ರಲ್ ಕಮಿಟಿ' ಮಹಾ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ

Update: 2018-04-10 11:45 GMT
ಎಂ. ಮುಹಮ್ಮದ್ ಶರೀಫ್ ಅಡ್ಡೂರು

ರಿಯಾದ್‌, ಎ. 10: ಅಡ್ಡೂರು ಸೆಂಟ್ರಲ್ ಕಮಿಟಿಯ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ 'ಅಡ್ಡೂರಿಯನ್ಸ್ ಮೀಟ್' ಕಾರ್ಯಕ್ರಮವು ಸೌದಿ ಅರೇಬಿಯಾದ ರಿಯಾದ್‌ನಲ್ಲಿ  ಎಂ.ಎಸ್. ರಫೀಕ್‌ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಮನ್ಸೂರ್ ತೋಕೂರ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಯು.ಪಿ ಇಕ್ಬಾಲ್‌ ಮಂಡಿಸಿದ ಲೆಕ್ಕ ಪತ್ರಗಳನ್ನು ಮಾಹಾಸಭೆ ಅಂಗೀಕರಿಸಿತು.

ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಎಂ. ಮುಹಮ್ಮದ್ ಶರೀಫ್ ಅಡ್ಡೂರು ಹಾಗೂ ಮಹಾ ಸಭೆಯ ಅಧ್ಯಕ್ಷ ಎಂ. ಎಸ್. ರಫೀಕ್‌ ಮಾತನಾಡಿ, ಸೆಂಟ್ರಲ್ ಕಮಿಟಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಅಡ್ಡೂರು ಸೆಂಟ್ರಲ್ ಕಮಿಟಿಯ ರಿಯಾದ್, ದಮ್ಮಾಮ್, ಅಲ್ ಹಸ ಹಾಗೂ ಬುರೈದಾ ಘಟಕಗಳ ಅಧ್ಯಕ್ಷರ ನೂತನ ಪದಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಎಂ. ಮುಹಮ್ಮದ್ ಶರೀಫ್ ಅಡ್ಡೂರು, ಉಪಾಧ್ಯಕ್ಷರುಗಳಾಗಿ ಎಂ.ಎಸ್. ರಫೀಕ್ ರಿಯಾದ್, ಎ.ಪಿ.ಮುಹಮ್ಮದ್ ದಮ್ಮಾಮ್, ಝೈನುದ್ದೀನ್ ಅಲ್ ಹಸ ಹಾಗೂ ಇಬ್ರಾಹೀಂ ಅಳಕೆ ಬುರೈದಾ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ತೋಕೂರು, ಕಾರ್ಯದರ್ಶಿಗಳಾಗಿ ಕಲಂದರ್ ಗುತ್ತು, ಶರೀಫ್ ಗೋಲಿಪಡ್ಪು, ಅಶ್ರಫ್ ನಡುಗುಡ್ಡೆ, ಎ.ಪಿ. ಶರೀಫ್, ಕೋಶಾಧಿಕಾರಿಗಳಾಗಿ ಯು.ಪಿ. ಇಕ್ಬಾಲ್, ಪಿ.ಸಿ.ಶರೀಫ್, ಲೆಕ್ಕ ಪರಿಶೋಧಕರಾಗಿ ಇಸ್ಮಾಯೀಲ್ ಬಂಡಶಾಲೆ ಮತ್ತು ಸೆಂಟ್ರಲ್ ಕಮಿಟಿಯ ನಾಲ್ಕು ಘಟಕಗಳ ತಲಾ 5 ಸದಸ್ಯರುಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಲಾಯಿತು ಹಾಗು 12 ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಯಿತು.

ಮಹಾಸಭೆಯಲ್ಲಿ ಕೆಎಂಟಿ ಅಬ್ದುಲ್ ರಝಾಕ್, ಸಲೀಮ್ ಕೊಯ್ಯಾರ್, ನವಾಝ್ ಆದ್ಯಪಾಡಿ ಹಾಗೂ ಝಾಪರ್ ಕೊಯ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಡ್ಡೂರು ಸೆಂಟ್ರಲ್ ಕಮಿಟಿಗೆ ಸತತವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಅಯ್ಕೆಯಾದ ಎಂ. ಮುಹಮ್ಮದ್ ಶರೀಫ್ ಅಡ್ಡೂರು ಅವರನ್ನು ಸನ್ಮಾನಿಸಲಾಯಿತು.

ಅಡ್ಡೂರಿನ ಅಭಿವೃದ್ಧಿಗಾಗಿ ನಿವೇಶನ ಒಂದರ ಖರೀದಿ, ಕಮಿಟಿಯ ಶಾಸನ ಬದ್ಧ ನೋಂದಾವಣೆ ಹಾಗೂ ಅಡ್ಡೂರಿನ ಸರಕಾರಿ ಶಾಲೆಗೆ ಸ್ಕೂಲ್ ಬಸ್ ಖರೀದಿಯ ಬಗ್ಗೆ ಚರ್ಚಿಸಿ, ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಎ.ಜಿ. ಇಸ್ಮಾಯೀಲ್ ಹಾಗೂ ಎ.ಎಂ. ಇಬ್ರಾಹೀಂ  ಖಿರಾಅತ್ ಪಠಿಸಿದರು. ಖಲಂದರ್ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಸಲಾಮ್ ಗೋಳಿಪಡ್ಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News