ಚೆನ್ನೈಗೆ ರೋಚಕ ಜಯ: ರಸೆಲ್ ಸಿಕ್ಸರ್ ಸುರಿಮಳೆ ವ್ಯರ್ಥ

Update: 2018-04-10 18:55 GMT

ಚೆನ್ನೈ, ಎ.10: ಐಪಿಎಲ್ ಟ್ವೆಂಟಿ-20 ಟೂರ್ನಿಯ 5ನೇ ಪಂದ್ಯದಲ್ಲಿ ಮಂಗಳವಾರ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಗೆಲುವಿಗೆ 203 ರನ್‌ಗಳ ಸವಾಲು ಪಡೆದ ಚೆನ್ನೈ ತಂಡ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 205 ರನ್ ಗಳಿಸಿ ರೋಚಕ ಜಯ ದಾಖಲಿಸಿತು.

 ಚೆನ್ನೈ ತಂಡದ ಬಿಲ್ಲಿಂಗ್ಸ್ 56, ವ್ಯಾಟ್ಸನ್ 42 ರನ್, ಅಂಬಟಿ ರಾಯುಡು 39 ರನ್, ಧೋನಿ 25 ರನ್ , ಬ್ರಾವೊ ಔಟಾಗದೆ 11, ಜಡೇಜ ಔಟಾಗದೆ 11 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್‌ ಪರ ರಸೆಲ್ ಅವರು ಸಿಕ್ಸರ್ ಸುರಿಮಳೆ ಸುರಿಸಿದರು.ಕೋಲ್ಕತಾ ನೈಟ್ ರೈಡರ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿತ್ತು.

10 ಓವರ್‌ಗಳಲ್ಲಿ 89ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಕೋಲ್ಕತಾ ತಂಡದ ಬ್ಯಾಟಿಂಗ್‌ನ್ನು ನಾಯಕ ದಿನೇಶ್ ಕಾರ್ತಿಕ್ (26)ಜೊತೆ ಮುನ್ನಡೆಸಿದ ರಸೆಲ್ ಅವರು 6ನೇ ವಿಕೆಟ್‌ಗೆ ಜೊತೆಯಾಟದಲ್ಲಿ 76 ರನ್ ಸೇರಿಸಿದರು. ರಸೆಲ್ ಅವರು ಔಟಾಗದೆ 36 ಎಸೆತಗಳಲ್ಲಿ 1 ಬೌಂಡರಿ 11 ಸಿಕ್ಸರ್ ನೆರವಿನಲ್ಲಿ 88 ರನ್ ಗಳಿಸಿದರು. ಅವರ ಬ್ಯಾಟಿಂಗ್ ನೆರವಿನಲ್ಲಿ ಕೋಲ್ಕತಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿದೆ.

    ರಸೆಲ್ ಅವರು 13.5ನೇ ಓವರ್‌ನಲ್ಲಿ ಡ್ವೇಯ್ನೆ ಬ್ರಾವೋ ಎಸೆತದಲ್ಲಿ ಮೊದಲ ಸಿಕ್ಸರ್ ಸಿಡಿಸಿದ್ದರು. ಆಗ ಅವರ ಸ್ಕೋರ್ 12 ಎಸೆತಗಳಲ್ಲಿ 1 ಬೌಂಡರಿ ನೆರವಿನಲ್ಲಿ 16 ಆಗಿತ್ತು. ಬಳಿಕ ಶಾರ್ದುಲ್ ಠಾಕೂರ್ ಅವರ 15.3 ಮತ್ತು 15.4 ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಎತ್ತಿದರು. ಇವರಿಗೆ ಸಾಥ್ ನೀಡಿದ ಕಾರ್ತಿಕ್ ಆ ಓವರ್‌ನ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದರು,

     ಶೇನ್ ವ್ಯಾಟ್ಸನ್‌ರ 17.1ನೇ ಓವರ್‌ನಲ್ಲಿ ರಸೆಲ್ ಸಿಕ್ಸರ್ ಸಿಡಿಸಿ ಅರ್ಧ ಶತಕ ಪೂರ್ಣಗೊಳಿಸಿದರು. 26(1ಬೌಂಡರಿ, 6 ಸಿಕ್ಸರ್) ಎಸೆತಗಳಲ್ಲಿ ಅವರು ಅರ್ಧಶತಕ ತಲುಪಿದರು. 17.4ನೇ ಓವರ್‌ನಲ್ಲಿ ಕಾರ್ತಿಕ್ ಅವರನ್ನು ವ್ಯಾಟ್ಸನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರೊಂದಿಗೆ ಕಾರ್ತಿಕ್-ರಸೆಲ್ ಜೊತೆಯಾಟವನ್ನು ವ್ಯಾಟ್ಸನ್ ಮುರಿದರು. 19ನೇ ಓವರ್‌ನಲ್ಲಿ ಬ್ರಾವೊ ಅವರ ಮೊದಲ 3 ಎಸೆತಗಳಲ್ಲಿ ರಸೆಲ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ಠಾಕೂರ್ ಅವರ ಮೊದಲ ಹಾಗೂ ಕೊನೆಯ ಎಸೆತದಲ್ಲಿ ರಸೆಲ್ ಸಿಕ್ಸರ್ ಬಾರಿ ತಂಡದ ಸ್ಕೋರ್‌ನ್ನು 202ಕ್ಕೆ ಏರಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಕೋಲ್ಕತಾ ನೈಟ್ ರೈಡರ್ಸ್‌ 202/6(ರಸೆಲ್ 88, ಉತ್ತಪ್ಪ 29, ಕಾರ್ತಿಕ್ 26, ಲಿನ್ 22; ವ್ಯಾಟ್ಸನ್ 39ಕ್ಕೆ 2).

 ಚೆನ್ನೈ ಸೂಪರ್ ಕಿಂಗ್ಸ್ 19.5 ಓವರ್‌ಗಳಲ್ಲಿ 205(ಬಿಲ್ಲಿಂಗ್ಸ್ 56, ವ್ಯಾಟ್ಸನ್ 42 ರನ್, ಅಂಬಟಿ ರಾಯುಡು 39 , ಧೋನಿ 25 , , ಬ್ರಾವೋ ಔಟಾಗದೆ 11)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News