ಕತರ್: ಎ.13ರಂದು 'ಪೀಸ್ ಟ್ರೋಫಿ-2018' ಕಬಡ್ಡಿ ಟೂರ್ನಮೆಂಟ್

Update: 2018-04-11 05:21 GMT

ಕತರ್, ಎ. 11: ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ (ಎಸ್ ಕೆಎಂಡಬ್ಲ್ಯೂಎ) ದೋಹಾ -ಕತರ್ ಇದರ ಆಶ್ರಯದಲ್ಲಿ  ಎ.13ರಂದು ಪೀಸ್ ಟ್ರೋಫಿ-2018 ಕಬಡ್ಡಿ ಟೂರ್ನಮೆಂಟ್ ಓಲ್ಡ್ ಐಡಿಯಲ್ ಇಂಡಿಯನ್ ಸ್ಕೂಲ್ ಗ್ರೌಂಡ್ ನಲ್ಲಿ ನಡೆಯಲಿದೆ.

ನಾಲ್ಕನೇ ಆವೃತ್ತಿಯ ಕಬಡ್ಡಿ ಟೂರ್ನಮೆಂಟ್ ನಲ್ಲಿ ಕರ್ನಾಟಕ ಮೂಲದ 10 ತಂಡಗಳು ಭಾಗವಹಿಸಲಿವೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕಬಡ್ಡಿ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಅಧ್ಯಕ್ಷೆ ಮಿಲಾನ್ ಅರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್ ಮೂಡುಬಿದಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News