ಫೈನಲ್ ವಂಚಿತ ಭಾರತ

Update: 2018-04-12 18:36 GMT

ಗೋಲ್ಡ್‌ಕೋಸ್ಟ್, ಎ.12: ಭಾರತದ ಮಹಿಳಾ ಹಾಕಿ ತಂಡ ಗುರುವಾರ ನಡೆದ ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದ ವಿರುದ್ದ 0-1 ಅಂತರದಿಂದ ಸೋಲುಂಡಿದೆ. ಕೊನೆಯ ಕ್ಷಣದಲ್ಲಿ ಎರಡು ಬಾರಿ ಗೋಲು ಬಾರಿಸುವ ಅವಕಾಶವನ್ನು ಕೈ ಚೆಲ್ಲಿದ ಭಾರತ ಫೈನಲ್ ತಲುಪಲು ವಿಫಲವಾಗಿದೆ. ಭಾರತ ಶನಿವಾರ ಕಂಚಿನ ಪದಕಕ್ಕಾಗಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತದ ಕೋಚ್ ಹರೇಂದ್ರ ಸಿಂಗ್ ಪಂದ್ಯ ಕೊನೆಗೊಳ್ಳಲು ನಾಲ್ಕು ನಿಮಿಷ ಬಾಕಿ ಇರುವಾಗ ಗೋಲ್‌ಕೀಪರ್ ಸವಿತಾ ಪೂನಿಯಾರನ್ನು ಮತ್ತೆ ಕಣಕ್ಕಿಳಿಸಿದರು. ಆದರೆ, ಆಟಗಾರ್ತಿಯರು ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಳ್ಳದೆ ನಿರಾಸೆಗೊಳಿಸಿದರು.

ಭಾರತ ಮೊದಲ ಕ್ವಾರ್ಟರ್‌ನಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರನ್ನು ಉಳಿಸಿಕೊಳ್ಳಲು ಯಶಸ್ವಿಯಾಯಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ನವನೀತ್ ಹಳದಿ ಕಾರ್ಡ್ ಪಡೆದಾಗ ಭಾರತ 10 ಮಹಿಳಾ ಆಟಗಾರ್ತಿಯರೊಂದಿಗೆ ಆಡಬೇಕಾಯಿತು.

ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯದ ಗ್ರೇಸ್ ಸ್ಟೀವರ್ಟ್ ಏಕೈಕ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News