ಟೈಟಾನಿಕ್ ಹಡಗು ದುರಂತ

Update: 2018-04-14 18:32 GMT

1755: ಸ್ಯಾಮ್ಯುಯೆಲ್ ಜಾನ್ಸನ್‌ರ ಎ ಡಿಕ್ಷನರಿ ಆಫ್ ಇಂಗ್ಲಿಷ್ ಲಾಂಗ್ವೇಜ್ ಕೃತಿ ಲಂಡನ್‌ನಲ್ಲಿ ಪ್ರಕಟವಾಯಿತು.

1788: ಬ್ರಿಟನ್, ನೆದರ್ಲೆಂಡ್ ಹಾಗೂ ಪರ್ಶಿಯಾಗಳ ಮಧ್ಯೆ ಶಾಂತಿ ಒಪ್ಪಂದ ಏರ್ಪಟ್ಟಿತು.

1896: ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದಿದ್ದ ಪ್ರಥಮ ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳು ಇಂದು ತೆರೆಕಂಡವು.

1912: 2,200 ಪ್ರಯಾಣಿಕರನ್ನು ಹೊಂದಿದ್ದ ಬ್ರಿಟನ್‌ನ ಐಷಾರಾಮಿ ಹಾಗೂ ಬೃಹತ್ ಹಡಗು ಟೈಟಾನಿಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಇಂದು 2:20ರ ಮುಂಜಾವಿನ ಸಮಯದಲ್ಲಿ ಬೃಹತ್ ಮಂಜುಗಡ್ಡೆಗೆ ಢಿಕ್ಕಿಯಾಗಿ ಮುಳುಗಿತು. ಸುಮಾರು 1,500 ಪ್ರಯಾಣಿಕರು ಸಾವನ್ನಪ್ಪಿದ ಈ ದುರಂತವು ಟೈಟಾನಿಕ್ ಹೆಸರಿನ ಇಂಗ್ಲಿಷ್ ಸಿನೆಮಾ ಆಗಿಯೂ ಖ್ಯಾತಿ ಗಳಿಸಿದೆ.

1959: ಕ್ಯೂಬಾ ದೇಶದ ಕ್ರಾಂತಿಕಾರಿ ಹಾಗೂ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅಮೆರಿಕಕ್ಕೆ ಸೌಹಾದರ್ ಭೇಟಿ ಆರಂಭಿಸಿದರು.

1964: ವಿಶ್ವದ ಅತ್ಯಂತ ಉದ್ದದ ಸೇತುವೆಗಳಲ್ಲಿ ಒಂದಾದ ಅಮೆರಿಕದ ಚೆಸಾಪೀಕ್ ಕೊಲ್ಲಿ ಸೇತುವೆ ಇಂದು ಲೋಕಾರ್ಪಣೆ ಗೊಂಡಿತು.

1970: ಲಿಬಿಯಾದ ಕ್ರಾಂತಿಕಾರಿ ನಾಯಕ ಗದ್ದಾಫಿಯಿಂದ ಲಿಬಿಯಾ ದೇಶದಲ್ಲಿ ಹಸಿರು ಕ್ರಾಂತಿಗೆ ಚಾಲನೆ ದೊರೆಯಿತು.

1978: ಇಟಲಿಯ ಬಗೋನಾ ಎಂಬಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳು ಪರಸ್ಪರ ಮುಖಾಮುಖಿ ಢಿಕ್ಕಿಗೆ ಒಳಗಾಗಿ 43 ಜನ ಸಾವನ್ನಪ್ಪಿದರು.

2002: ಚೀನಾದ ಬೋಯಿಂಗ್ ವಿಮಾನ ಸಿಎ129 ವ್ಯಾಪಕ ಮಳೆ ಹಾಗೂ ಮಂಜು ಆವರಿಸಿದ ಕಾರಣ ದ.ಕೊರಿಯಾದ ಬುಸಾನ್ ಎಂಬಲ್ಲಿ ಪತನಗೊಂಡಿತು. ಈ ಅವಘಡದಲ್ಲಿ 128 ಜನ ಸಾವನ್ನಪ್ಪಿದರು.

2017: ಸಿರಿಯಾದಲ್ಲಿ ಆತ್ಮಾಹುತಿ ಕಾರ್‌ಬಾಂಬ್ ಸ್ಫೋಟಗೊಂಡ ಪರಿಣಾಮ 70 ಮಕ್ಕಳು ಸಹಿತ 176 ಜನ ಮೃತಪಟ್ಟರು. 1469: ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಜನ್ಮದಿನ.

1963: ಭಾರತದ ಖ್ಯಾತ ಕ್ರಿಕೆಟಿಗ ಮನೋಜ್ ಪ್ರಭಾಕರ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ