ಕಾಮನ್ ವೆಲ್ತ್ ಗೇಮ್ಸ್ : ಭಾರತ ಪಡೆದ ಪದಕಗಳ ಸಂಖ್ಯೆ 66

Update: 2018-04-15 05:49 GMT

ಗೋಲ್ಡ್ ಕೋಸ್ಟ್ , ಎ.15: ಭಾರತ ಈ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ  ಪಡೆದ ಪದಕಗಳ ಸಂಖ್ಯೆ 66ಕ್ಕೇರಿದೆ. 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ಬಾಚಿಕೊಂಡಿದೆ. ಕೂಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

ರವಿವಾರ ನಡೆದ ಸ್ಪರ್ಧೆಗಳಲ್ಲಿ  ಬ್ಯಾಡ್ಮಿಂಟನ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ಚಿನ್ನ ಮತ್ತು ಪಿ.ವಿ ಸಿಂಧು ಬೆಳ್ಳಿ ಪಡೆದಿದ್ದಾರೆ.

ಬ್ಯಾಡ್ಮಿಂಟನ್ ನ ಪುರುಷರ ಸಿಂಗಲ್ಸ್ ನಲ್ಲಿ ಕೆ.ಶ್ರೀಕಾಂತ್ ,  ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬೆಳ್ಳಿ ಪಡೆದರು.

 ಸ್ಕ್ವಾಷ್ ನ ಮಹಿಳೆಯರ ಡಬಲ್ಸ್ ನಲ್ಲಿ ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮತ್ತು ಜೋಷ್ನಾ ಚಿನ್ನಪ್ಪ ಬೆಳ್ಳಿ,  ಟೇಬಲ್ ಟೇನಿಸ್ ನ ಮಿಶ್ರ ಡಬಲ್ಸ್ ನಲ್ಲಿ ಮಾನಿಕಾ ಬಾತ್ರಾ ಮತ್ತು ಸತ್ಯನ್ ಜ್ಞಾನಸೇಕರನ್ , ಪುರುಷರ ಸಿಂಗಲ್ಸ್ ನಲ್ಲಿ ಅಚಂತ ಶರತ್  ಕಂಚು ತನ್ನದಾಗಿಸಿಕೊಂಡರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News