ನ್ಯಾಯಾಧೀಶರ ಸಂಬಂಧಿಕರನ್ನೇ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕ ಮಾಡಿರುವ ಆರೋಪ

Update: 2018-04-15 08:47 GMT

ಹೊಸದಿಲ್ಲಿ, ಎ.15: ದೇಶದ ದೊಡ್ಡ ಹೈಕೋರ್ಟ್ ಎನಿಕೊಂಡಿರುವ ಅಲಹಾಬಾದ್ ಹೈಕೊರ್ಟ್ ಗೆ ನೇಮಕ ಮಾಡಲಾದ 30ನ್ಯಾಯಾಧೀಶರುಗಳಲ್ಲಿ ಆನೇಕ  ಮಂದಿ ವಕೀಲರು ಸುಪ್ರೀಂ ಕೋರ್ಟ್  ಮತ್ತು ಹೈಕೋರ್ಟ್ ನ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರ ಸಂಬಂಧಿಕರು ಎಂಬ ಆರೋಪ ಕೇಳಿ ಬಂದಿದೆ.

ಕೋಲಿಜಿಯಂ  ಶಿಫಾರಸ್ಸಿನಂತೆ ಕಳೆದ ಫೆಬ್ರವರಿಯಲ್ಲಿ  ಅಲಹಾಬಾದ್  ಹೈಕೋರ್ಟ್ ಗೆ 33 ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಈ ನೇಮಕಾತಿಯ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಪ್ರಧಾನ ಮಂತ್ರಿ ಕಚೇರಿಗೆ ಮತ್ತು ಕಾನೂನು ಸಚಿವಾಲಯಕ್ಕೆ  ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಇಂಟೆಲಿಜೆನ್ಸ್ ಬ್ಯೂರೊಗೆ ತನಿಖೆಗೆ ಆದೇಶ ನೀಡಲಾಗಿತ್ತು.

ನೇಮಕವಾದ  ಜಡ್ಜ್ ಗಳ ಪೈಕಿ  11 ಮಂದಿ  ಸುಪ್ರೀಂ ಕೋರ್ಟ್  ಮತ್ತು ಹೈಕೋರ್ಟ್  ನ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರುಗಳ ಸಂಬಂಧಿಕರು  ಎನ್ನುವುದು  ಗುಪ್ತಚರ ಸಂಸ್ಥೆ ನಡೆಸಿದ  ತನಿಖೆಯಿಂದ ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ಎಸ್ ಸಿ ಮತ್ತು ಎಸ್ಟಿ ಸಮುದಾಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News