ದೋಹಾ: ಎಸ್‌ಕೆಎಂಡಬ್ಲ್ಯೂಎ ವತಿಯಿಂದ ಕಬಡ್ಡಿ ಪಂದ್ಯಾಟ

Update: 2018-04-15 15:02 GMT

ದೋಹಾ, ಎ.15: 'ಎಸ್‌ಕೆಎಂಡಬ್ಲ್ಯೂಎ' ವತಿಯಿಂದ ಇಲ್ಲಿನ ಇಂಡಿಯನ್ ಸ್ಕೂಲ್‌ನಲ್ಲಿ 4ನೇ ಶಾಂತಿ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ಶುಕ್ರವಾರ ನಡೆಯಿತು.

ಅಂದು ಬೆಳಗ್ಗೆ 8 ಗಂಟೆಗೆ ಎಸ್‌ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್ ಅಬ್ಬಾಸ್ ಮೂಡುಬಿದಿರೆ ಸ್ವಾಗತ ಭಾಷಣ ಮಾಡಿದರು ಮತ್ತು ಈ ಕಾರ್ಯಾಕ್ರಮದ ಉದ್ದೇಶವಾಗಿರುವ ಶಾಂತಿಯ ಚಿಹ್ನೆಯಾದ ಪಾರಿವಾಳಗಳನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಖ್ಯಾತ ಉದ್ಯಮಿ ಮತ್ತು ಮಾನವತಾವಾದಿ ರವಿ ಶೆಟ್ಟಿ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೊತೆಗೆ ಕರ್ನಾಟಕದ ಇತರ ಹಲವು ಸಮಿತಿಗಳ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಿದ್ದರು. ಕಿರಾಅತ್ ಪಠಿಸಿದ ನಂತರ ಸ್ವಾಗತ ಭಾಷಣ ಮಾಡಲಾಯಿತು ಮತ್ತು ಕಾಸಿಂ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳಿಗೆ ಪ್ರಮಾಣ ವಚನ ಬೋಧಿಸಿದರು.

ಪಂದ್ಯಾಟದಲ್ಲಿ ಎಲ್ಲ ಆಟಗಾರರು ಅತ್ಯಂತ ಉನ್ನತ ಮಟ್ಟದ ಆಟವನ್ನು ಪ್ರದರ್ಶಿಸಿದರು. ಪಂದ್ಯಾವಳಿಯ ಉದ್ದಕ್ಕೂ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸುವ ಮೂಲಕ ಮಾದರಿ ಪಂದ್ಯಾವಳಿಗೆ ಸಾಕ್ಷಿಯಾದರು. ಪಂದ್ಯಾಟದ ಅಂತ್ಯದ ವರೆಗೂ ಪ್ರೇಕ್ಷಕರು ಕೂತುಹಲದಿಂದ ಆಟಗಳನ್ನು ವೀಕ್ಷಿಸಿದರು ಮತ್ತು ಆಟಗಾರರನ್ನು ಹುರಿದುಂಬಿಸಿದರು.

ಪಂದ್ಯಾಟದಲ್ಲಿ ಕೆ.ಎಂ ತಂಡ ವಿಜಯಿಯಾಗಿ ಹೊರಹೊಮ್ಮಿದರೆ ಎಸ್‌ಕೆಎಂಡಬ್ಲ್ಯೂಎ ಎರಡನೇ ಸ್ಥಾನ ಪಡೆದುಕೊಂಡಿತು. ರಾತ್ರಿ ಹತ್ತು ಗಂಟೆಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನೆರೆವೇರಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಖ್ಯಾತ ಮಾನವತಾವಾದಿ ಹಬೀಬ್ ನಬಿ ಭಾಗವಹಿಸಿದ್ದರು. ಅವರನ್ನು ಎಸ್‌ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್ ಅಬ್ಬಾಸ್ ಹಾಗೂ ಸಮಿತಿಯ ಸದಸ್ಯರಾದ ಫಿರೋಝ್, ಇಬ್ರಾಹಿಂ ಬ್ಯಾರಿ, ಸಮೀಮ್ ಮತ್ತು ಇತರ ಸದಸ್ಯರು ಸನ್ಮಾನಿಸಿದರು.

ರಿಝ್ವಾನ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಎಎಸ್‌ಕೆಎಂಡಬ್ಲ್ಯೂಎ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News