ಆಸಿಫಾ ಹತ್ಯಾ ಪ್ರಕರಣವು ಅಖಂಡ ಭಾರತದ ಕಗ್ಗೊಲೆ: ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಖಂಡನೆ

Update: 2018-04-15 15:10 GMT

ದುಬೈ, ಎ. 15: ಭಾರತ ದೇಶದ ಸುಂದರ ಸಂಸ್ಕೃತಿ ಮತ್ತು ವಿವಿಧತೆಯಲ್ಲಿ ಏಕತೆಯ ಅತ್ಯಂತ ಮಾದರಿ ರಾಷ್ಟ್ರ ಎಂಬ ಹೆಗ್ಗಳಿಕೆ ಒಂದು ಇತಿಹಾಸವಾಗಿತ್ತು, ಆದರೆ ಇತ್ತೀಚಿಗಿನ ಘಟನೆಗಳು ಈ ದೇಶವನ್ನು ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ, ಮನುಷ್ಯರಾಶಿಯನ್ನು ಸವಾಲೆಸಗಿ ದೇಶದವನ್ನು ನಡುಗಿಸಿದ ಹೃದಯವಿದ್ರಾವಕ‌ ಘಟನೆಯೊಂದು ಭಾರತದ ಕಾಶ್ಮೀರದಲ್ಲಿ ನಡೆದಿರುವುದು ಖಂಡನೀಯ.

ಜಮ್ಮು ಕಾಶ್ಮೀರದ ಕಾಥುವಾ ಎಂಬಲ್ಲಿ ಎಂಟು ವರ್ಷ ಪ್ರಾಯದ ಆಸಿಫಾ ಎಂಬ ಮುಗ್ದ ಬಾಲಕಿಯನ್ನು ಅಪಹರಿಸಿ ಅರುವತ್ತು ದಾಟಿದ ಮಾಜಿ ಸರಕಾರಿ ಉದ್ಯೋಗಿ ಸಹಿತ ನ್ಯಾಯ ಒದಗಿಸ ಬೇಕಾಗಿದ್ದ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ನಾಲ್ಕು ಮನುಷ್ಯ ಮೃಗಗಳು  ಏಳು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆಯು ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ.

ತಮ್ಮ ಕುದುರೆಯನ್ನು ಕರೆತರಲು ಹೋಗಿದ್ದ ಆಸಿಫಾ ಬಾನು ಎಂಬ ಎಂಟು ಹರೆಯದ ಕಂದಮ್ಮಳನ್ನು ಅಪಹರಿಸಿ ದೇವಸ್ಥಾನದಲ್ಲಿ ಕೂಡಿ ಹಾಕಿದರು, ಬಳಿಕ ಅನ್ನ ಪಾನೀಯ ನೀಡದೆ ಲಹರಿ ವಸ್ತುಗಳು ಕುಡಿಸಿ ಬಹು ದಿನಗಳು ಹಲವರಿಂದ ನಿರಂತರ ಅತ್ಯಾಚಾರಕ್ಕೆ ಬಳಸಿ, ಕೊನೆಯದಾಗಿ ಕುತ್ತಿಗೆ ತಿರುವಿ ಕೊಂದರು, ಮತ್ತೆ ಮರಣ ಧ್ರಡೀಕರಿಸುವುದಕ್ಕೆ ಕಲ್ಲಿನಿಂದ ತಲೆಗೆ ಜಜ್ಜಿ ಅತೀ ಕ್ರೂರವಾಗಿ ಕೊಂದು ಹಾಕಿದರು. ಈ ಕ್ರತ್ಯ ನಡೆಸಿ‌ದ  ಕಾಮ-ನರ ಪಿಶಾಚಿಗಳು ಮಾನವ ಸಮೂಹಕ್ಕೆ ಕಂಠಕ. ಈ ಮೃಗೀಯವಾಗಿ  ಕೊಲೆಗೈದ ಕಿರಾತಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ದೇಶದ ಭರಣ ಘಟನೆ ನೀಡುವ ಅತ್ಯಂತ ದೊಡ್ಡ ಶಿಕ್ಷೆ  ಕಾರ್ಯಗತಗೊಳಿಸುವುದು ಸಾಂಸ್ಕೃತಿಕ ಭಾರತೀಯರ ನ್ಯಾಯುತ ಅವಶ್ಯಕತೆಯಾಗಿದೆ ಎಂದು  ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಆಗ್ರಹಿಸಿದೆ.

ನರ ಹಂತಕರಿಗೆ ಸಾಥ್ ನೀಡುವ ಶಕ್ತಿಗಳನ್ನು ತರಾಟೆಗೆ ತೆಗೆದ ಕೆಸಿಎಫ್  ಶೀಘ್ರವೇ ನರಹಂತಕರಿಗೆ ಶಿಕ್ಷೆ ನೀಡಿ ದೇಶದ ಮಾನವ ಕುಲಕ್ಕೆ ನ್ಯಾಯ ಒದಗಿಸಬೇಕು ಮತ್ತು ಅಸಿಫಾಳ ಕುಟುಂಬಕ್ಕೆ ಸರಕಾರ ಬೇಕಾದ ಸಹಾಯ ಮಾಡಬೇಕೆಂದು  ಸರಕಾರಕ್ಕೆ ಮನವಿ ಮಾಡಿದೆ ಎಂದು  ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಹಾಜಿ ಶೇಖ್ ಬಾವ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News