ಅಮೆರಿಕದಲ್ಲಿ ಹಿಮ ಬಿರುಗಾಳಿ, ಹಿಮಪಾತ: 3 ಸಾವು

Update: 2018-04-15 17:38 GMT
ಸಾಂದರ್ಭಿಕ ಚಿತ್ರ

ಮಿನಪೊಲಿಸ್ (ಅಮೆರಿಕ), ಎ. 15: ಅಮೆರಿಕದ ಗಲ್ಫ್ ಕೋಸ್ಟ್‌ನಿಂದ ಗ್ರೇಟ್ ಲೇಕ್ಸ್‌ವರೆಗೆ ಬೀಸುತ್ತಿರುವ ಹಿಮ ಬಿರುಗಾಳಿಯಿಂದಾಗಿ ಮಧ್ಯ ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ ಹಾಗೂ ಮಳೆ ಮತ್ತು ಆಲಿಕಲ್ಲು ಮಳೆ ಬೀಳುತ್ತಿದೆ.

ಈ ವಲಯದ ಹಲವಾರು ವಿಮಾನ ಹಾರಾಟಗಳನ್ನು ರದ್ದುಪಡಿಸಲಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಮಿನಿಪೊಲಿಸ್- ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 400 ವಿಮಾನಗಳನ್ನು ರದ್ದುಪಡಿಸಲಾಗಿದೆ. ಇಲ್ಲಿ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ರನ್‌ವೇಗಳನ್ನು ಸರಿಯಾಗಿಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News