ಐಪಿಎಲ್: ಡೆಲ್ಲಿಗೆ ಕಠಿಣ ಸವಾಲು ವಿಧಿಸಿದ ಕೆಕೆಆರ್

Update: 2018-04-16 16:45 GMT

 ಕೋಲ್ಕತಾ, ಎ.16: ಕೋಲ್ಕತಾ ನೈಟ್ ರೈಡರ್ಸ್‌ ತಂಡ ಐಪಿಎಲ್ ಟ್ವೆಂಟ-20 ಟೂರ್ನಿಯ 13ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಕಠಿಣ ಸವಾಲು ವಿಧಿಸಿದೆ.

 ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿದೆ.

ನಿತೀಶ್ ರಾಣಾ 59 ರನ್(35ಎ, 5ಬೌ,4ಸಿ), ಕ್ರಿಸ್ ಲಿಯೊನ್ 31 ರನ್, ರಾಬಿನ್ ಉತ್ತಪ್ಪ 35 ರನ್, ಆ್ಯಂಡ್ರೆ ರಸೆಲ್ 41 ರನ್, ದಿನೇಶ್ ಕಾರ್ತಿಕ್ 19ರನ್, ಸುನೀಲ್ ನರೇನ್ 1ರನ್, ಶುಭಮ್ ಗಿಲ್ 6ರನ್,ಟಾಮ್ ಕುರ್ರನ್ 2 ರನ್ ಗಳಿಸಿದರು.

 ಡೆಲ್ಲಿ ತಂಡದ ರಾಹುಲ್ ಟೆವಾಟಿಯಾ 3 ವಿಕೆಟ್, ಟ್ರೆಂಟ್ ಬೌಲ್ಟ್ ಮತ್ತು ಕ್ರಿಸ್ ಮೊರಿಸ್ ತಲಾ 2 ವಿಕೆಟ್ , ಮುಹಮ್ಮದ್ ಶಮಿ ಮತ್ತು ಎಸ್.ನದೀಮ್ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News