ತಮಿಳುನಾಡಿನ ಪದಕ ವಿಜೇತರಿಗೆ ಪುರಸ್ಕಾರ

Update: 2018-04-16 18:27 GMT

ಚೆನ್ನೈ, ಎ.16: ಗೋಲ್ಡ್‌ಕೋಸ್ಟ್‌ನಲ್ಲಿ ರವಿವಾರ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ ತಮಿಳುನಾಡಿನ ಅಥ್ಲೀಟ್‌ಗಳಿಗೆ ತಮಿಳುನಾಡು ಸರಕಾರ ಪ್ರೋತ್ಸಾಹಧನ ಪ್ರಕಟಿಸಿದೆ.

ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸ್ಕ್ವಾಷ್ ತಾರೆಯರಾದ ಜೋಷ್ನಾ ಚಿನ್ನಪ್ಪ, ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಶಾಲ್, ಟೇಬಲ್ ಟೆನಿಸ್ ಆಟಗಾರರಾದ ಎ.ಶರತ್ ಕಮಾಲ್ ಮತ್ತು ಜಿ ಸತ್ಯನ್ ಅವರಿಗೆ ಪತ್ರಬರೆದು ಪ್ರೋತ್ಸಾಹಕ ಧನ ಪ್ರಕಟಿಸಿದ್ದಾರೆ.

 ಎರಡು ಬೆಳ್ಳಿ ಪದಕ ಪಡೆದ ದೀಪಿಕಾ ಪಲ್ಲಿಕಲ್ 60 ಲಕ್ಷ ರೂ. ಪಡೆಯಲಿದ್ದಾರೆ. ಚಿನ್ನಪ್ಪ ಮತ್ತು ಘೋಶಾಲ್‌ಗೆ ತಲಾ 30 ಲಕ್ಷ ರೂ. ದೊರೆಯಲಿದೆ.

   ಕಮಲ್ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಮತ್ತು ಸಿಂಗಲ್ಸ್‌ನಲ್ಲಿ ಕಂಚು ಪಡೆದಿದ್ದರು. ಅವರು 50 ಲಕ್ಷ ರೂ. ಪಡೆಯಲಿದ್ದಾರೆ. ಕಮಲ್‌ರಿಗೆ ಈ ಮೊದಲು ಮುಖ್ಯಮಂತ್ರಿ ಪಳನಿಸ್ವಾಮಿ 50 ಲಕ್ಷ ರೂ. ಪ್ರಕಟಿಸಿದ್ದರು. ಈಗ ಹೆಚ್ಚುವರಿಯಾಗಿ 50 ಲಕ್ಷೂ. ಪಡೆಯಲಿದ್ದಾರೆ. ಕಮಲ್ ತಂಡದ ಜಿ.ಸತ್ಯನ್ ಅವರಿಗೆ ಮುಖ್ಯಮಂತ್ರಿ 50 ಲಕ್ಷ ರೂ. ಪ್ರಕಟಿಸಿದ್ದಾರೆ. ಈ ಹಿಂದೆ ಅವರಿಗೆ ಮುಖ್ಯ ಮಂತ್ರಿ 50 ಲಕ್ಷ ರೂ. ಪ್ರಕಟಿಸಿದ್ದರು. ಇದರಿಂದಾಗಿ ಕಮಲ್ ಮತ್ತು ಸತ್ಯನ್ ತಲಾ 1 ಕೋಟಿ ರೂ. ಉಡುಗೊರೆ ತಮಿಳುನಾಡು ಸರಕಾರದಿಂದ ದೊರೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News