ವಿಶ್ವಕಪ್‌ನಲ್ಲಿ ನೇಮರ್ ಬ್ರೆಝಿಲ್ ತಂಡವನ್ನು ಮುನ್ನಡೆಸಲಿದ್ದಾರೆ: ಪೀಲೆ

Update: 2018-04-16 18:29 GMT

ದುಬೈ, ಎ.16: ರಷ್ಯಾದಲ್ಲಿ ನಡೆಯಲಿರುವ ಮುಂಬರುವ ಫಿಫಾ ವಿಶ್ವಕಪ್‌ನಲ್ಲಿ ಬ್ರೆಝಿಲ್ ಫುಟ್ಬಾಲ್ ತಂಡವನ್ನು ನೇಮರ್ ನಾಯಕರಾಗಿ ಮುನ್ನಡೆಸುವರು ಎಂದು ಬ್ರೆಝಿಲ್‌ನ ದಂತಕತೆ ಪೀಲೆ ತಿಳಿಸಿದ್ದಾರೆ.

ಗಾಯದ ಸಮಸ್ಯೆ ಎದುರಿಸುತ್ತಿರುವ ನೇಮರ್ ಸಂಪೂರ್ಣ ಚೇತರಿಸಿಕೊಂಡು ವಿಶ್ವಕಪ್‌ನಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸುವರು ಎಂಬ ವಿಶ್ವಾಸವನ್ನು ಪೀಲೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 77ರ ಹರೆಯದ ಪೀಲೆ ನೇಮರ್ ಬ್ರೆಝಿಲ್ ತಂಡವನ್ನು ನಾಯಕರಾಗಿ ಮುನ್ನಡೆಸಿ 7ನೇ ಬಾರಿ ಬ್ರೆಝಿಲ್‌ಗೆ ವಿಶ್ವಕಪ್ ತಂದುಕೊಡಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News