ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ:ಕಾನೂನು ಆಯೋಗಕ್ಕೆ ಶಿಫಾರಸು

Update: 2018-04-18 12:50 GMT

ಹೊಸದಿಲ್ಲಿ,ಎ.18 ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹಾಗೂ ಅದರ ಜೊತೆಗೆ ಸೇರಿಕೊಂಡಿರುವ ಕ್ರಿಕೆಟ್ ಸಂಸ್ಥೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರಲು ಭಾರತ ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಬುಧವಾರ ಶಿಫಾರಸು ಮಾಡಿದೆ.

ಸಂವಿಧಾನದ ವಿಧಿ 1ರ ವ್ಯಾಖ್ಯಾನದಂತೆ ಬಿಸಿಸಿಐಯನ್ನು ಸರಕಾರಿಎಂದು ವಿಂಗಡಿಸುವಂತೆ ಕಾನೂನು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

 ದೇಶದ ಎಲ್ಲ ಕ್ರೀಡಾ ಸಂಘಟನೆಗಳನ್ನು ಆರ್‌ಟಿಐ ಕಾಯ್ದೆ ಅಡಿ ತರಲಾಗಿದೆ.ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆ ಅಡಿ ಏಕೆ ತರಬಾರದು ಎಂದು ಕಾನೂನು ಆಯೋಗ ಪ್ರಶ್ನಿಸಿದೆ.

ತಮಿಳುನಾಡು ಸೊಸೈಟೀಸ್ ರಿಜಿಸ್ಟ್ರೇಶನ್ ಆ್ಯಕ್ಟ್ ಅಡಿಯಲ್ಲಿ ಖಾಸಗಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ.

ಒಂದು ವೇಳೆ ಕೇಂದ್ರ ಸರಕಾರವು ಕಾನೂನು ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದರೆ ಆರ್‌ಟಿಐ ಕಾಯ್ದೆ ಅಡಿ ಬಿಸಿಸಿಐಯನ್ನು ಸಾರ್ವಜನಿಕ ಮಂಡಳಿ ಅಥವಾ ಸಂಸ್ಥೆಯಾಗಿ ವಿಂಗಡಿಸಲಾಗುತ್ತದೆ.ಆಗ ಯಾರೂ ಕೂಡ ಟೀಮ್ ಇಂಡಿಯಾ,ರಾಜ್ಯ ಹಾಗೂ ವಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸುವ ಆಟಗಾರರ ಆಯ್ಕೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಬಹುದು.ಬಿಸಿಸಿಐ ಇತರ ಕ್ರಿಕೆಟ್ ರಾಷ್ಟ್ರಗಳು ಹಾಗೂ ಐಸಿಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದರ ವಿರುದ್ಧವೂ ಪಿಐಎಲ್ ಸಲ್ಲಿಸಬಹುದು.

ಬಿಸಿಸಿಐಯನ್ನು ಆರ್‌ಟಿಐ ವ್ಯಾಪ್ತಿಗೆ ತರುವ ಸಂಬಂಧ ಕಾನೂನು ಚೌಕಟ್ಟನ್ನು ಪರಿಶೀಲಿಸುವಂತೆ 21ರ ಜುಲೈನಲ್ಲಿ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕಾನೂನು ಆಯೋಗಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News