ಸಿರಿಯ: ಇನ್ನೊಂದು ಪಟ್ಟಣದ ಬಂಡುಕೋರರೂ ಶರಣು

Update: 2018-04-19 18:03 GMT

ಬೈರೂತ್, ಎ. 19: ಸಿರಿಯ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ರಾಜಧಾನಿ ಡಮಾಸ್ಕಸ್‌ನ ಈಶಾನ್ಯದಲ್ಲಿರುವ ಪಟ್ಟಣವೊಂದರ ನೂರಾರು ಬಂಡಕೋರರು ತಮ್ಮ ಶಸ್ತ್ರಗಳನ್ನು ಒಪ್ಪಿಸಿ ಪಟ್ಟಣದಿಂದ ಹೊರ ಹೋಗುವ ಬಸ್ಸುಗಳನ್ನು ಏರಿದ್ದಾರೆ ಎಂದು ಸರಕಾರಿ ಮಾಧ್ಯಮ ಗುರುವಾರ ವರದಿ ಮಾಡಿದೆ.

 ಡುಮಯ್ರ ಪಟ್ಟಣದ ಬಂಡುಕೋರರು ಸಿರಿಯ ಸರಕಾರಕ್ಕೆ ಶರಣಾಗಿದ್ದು, ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಉತ್ತರ ಸಿರಿಯದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶಗಳಲ್ಲಿ ಬಿಡಲಾಗುವುದು.

ಬಂಡುಕೋರ ಬಣದ 1,500 ಹೋರಾಟಗಾರರು ಮತ್ತು ಅವರ 3,500 ಕುಟುಂಬ ಸದಸ್ಯರೊಂದಿಗೆ ಪಟ್ಟಣದಿಂದ ಹೊರಹೋಗುತ್ತಿದ್ದಾರೆ ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ‘ಸನ’ ತಿಳಿಸಿದೆ. ಅವರು ಸಿರಿಯ-ಟರ್ಕಿ ಗಡಿ ಸಮೀಪದ ಪ್ರತಿಪಕ್ಷ ನಿಯಂತ್ರಣದ ಜರಬ್ಲಸ್ ಪಟ್ಟಣಕ್ಕೆ ತೆರಳಲಿದ್ದಾರೆ.

ಕಳೆದ ವಾರ ಸಂಪೂರ್ಣವಾಗಿ ಸರಕಾರದ ನಿಯಂತ್ರಣಕ್ಕೆ ಬಂದ ಪೂರ್ವ ಘೌತ ವಲಯದಿಂದ ಡುಮಯ್ರೆ ಪಟ್ಟಣ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News