ಕೌಂಟಿ ಕ್ರಿಕೆಟ್‌ನಿಂದ ನನಗೆ ಲಾಭ: ಕೊಹ್ಲಿ

Update: 2018-04-19 18:47 GMT

ಹೊಸದಿಲ್ಲಿ, ಎ.19: ಭಾರತ ತಂಡ ಇಂಗ್ಲೆಂಡ್‌ಗೆ ಕ್ರಿಕೆಟ್ ಪ್ರವಾಸ ಕೈಗೊಳ್ಳುವ ಮೊದಲು ವಿರಾಟ್ ಕೊಹ್ಲಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸರಣಿ ಆರಂಭಕ್ಕೆ ಮೊದಲೇ ಕೌಂಟಿ ಕ್ರಿಕೆಟ್ ಆಡಲು ಬಯಸಿದ್ದಾರೆ.

‘‘ಕೌಂಟಿ ಕ್ರಿಕೆಟ್ ಆಡುವುದರಿಂದ ನನ್ನ ಪಂದ್ಯವನ್ನು ಉತ್ತಮಪಡಿಸಿಕೊಳ್ಳಬಹುದು. ಇದು ನನ್ನ ಅತ್ಯಂತ ಸವಾಲಿನ ಹಾಗೂ ಸ್ಪರ್ಧಾತ್ಮಕ ವಿಚಾರವಾಗಿದ್ದು, ಬೇಗನೆ ಇಂಗ್ಲೆಂಡ್‌ಗೆ ತೆರಳುವುದರಿಂದ ಅನುಕೂಲವಾಗುತ್ತದೆ ಎಂಬ ಬಗ್ಗೆ ಖಚಿತತೆಯಿಲ್ಲ’’ ಎಂದು ಕೊಹ್ಲಿ ಹೇಳಿದ್ದಾರೆ. 2014ರ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ವೇಳೆ ಕೊಹ್ಲಿ 5 ಟೆಸ್ಟ್ ಪಂದ್ಯಗಳಲ್ಲಿ 13.40ರ ಸರಾಸರಿಯಲ್ಲಿ ಕೇವಲ 134 ರನ್ ಗಳಿಸಿದ್ದರು. ಕೊಹ್ಲಿ ಕೌಂಟಿ ತಂಡ ಸರ್ರೆ ಪರ ಆಡಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಈ ವಿಚಾರವನ್ನು ಕೌಂಟಿ ಕ್ಲಬ್ ಅಥವಾ ಕೊಹ್ಲಿ ಈವರೆಗೆ ಖಚಿತಪಡಿಸಿಲ್ಲ. ಹಿರಿಯ ಆಟಗಾರರು ಇಂಗ್ಲೆಂಡ್‌ಗೆ ತೆರಳಿ ಕೌಂಟಿ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಡಲು ಬಿಸಿಸಿಐ ನಿರ್ಧರಿಸಿದೆ. ಇಂಗ್ಲೆಂಡ್‌ನ ವಾತಾವರಣದಲ್ಲಿ ಈ ನಿರ್ಧಾರ ಸ್ವಾಗತಾರ್ಹ ಹೆಜ್ಜೆಯಾಗಿದೆ. ಚೇತೇಶ್ವರ ಪೂಜಾರ ಹಾಗೂ ಇಶಾಂತ್ ಶರ್ಮ ಈಗ ಇಂಗ್ಲೆಂಡ್‌ನಲ್ಲಿದ್ದು, ಈ ಇಬ್ಬರು ಆಟಗಾರರು ಐಪಿಎಲ್ ಫ್ರಾಂಚೈಸಿಯಿಂದ ಆಯ್ಕೆಯಾಗಿಲ್ಲ.

 ಭಾರತ ತಂಡ ಆಗಸ್ಟ್ 1 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಟೆಸ್ಟ್ ಸರಣಿಗೆ ಆರಂಭಕ್ಕೆ ಮೊದಲು ಚತುರ್ದಿನ ಅಭ್ಯಾಸ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News