2022ರ ಗೇಮ್ಸ್ ಬಹಿಷ್ಕಾರ ಹೇಳಿಕೆ ಸರಿಯಲ್ಲ: ಬಾತ್ರಾ

Update: 2018-04-19 18:52 GMT

ಹೊಸದಿಲ್ಲಿ, ಎ.19: ಶೂಟಿಂಗ್ ಕ್ರೀಡೆ ಇಲ್ಲವೆಂಬ ಕಾರಣಕ್ಕೆ 2022ರ ಕಾಮನ್‌ವೆಲ್ತ್ ಗೇಮ್ಸ್ ಬಹಿಷ್ಕಾರ ಮಾಡುತ್ತೇವೆಂಬ ಹೇಳಿಕೆ ಅತ್ಯಂತ ತೀಕ್ಷ್ಣವಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಎನ್‌ಒಎ)ಅಧ್ಯಕ್ಷ ನರೇಂದ್ರ ಬಾತ್ರಾ ಹೇಳಿದ್ದಾರೆ.

 ಒಂದು ವೇಳೆ ಶೂಟಿಂಗ್‌ನ್ನು ಗೇಮ್ಸ್‌ನಿಂದ ಕೈಬಿಟ್ಟರೆ ಗೇಮ್ಸ್‌ನ್ನು ಬಹಿಷ್ಕರಿಸಲಾಗುತ್ತದೆ ಎಂದು ಇತ್ತೀಚೆಗೆ ಭಾರತದ ರೈಫಲ್ ಸಂಸ್ಥೆ(ಎನ್‌ಆರ್‌ಎಐ)ಅಧ್ಯಕ್ಷ ರಣಿಂದರ್ ಸಿಂಗ್ ಹೇಳಿಕೆ ನೀಡಿದ್ದರು.

‘‘ರಣಿಂದರ್ ಹೇಳಿಕೆ ನೀಡಲು ಸ್ವತಂತ್ರರಿದ್ದಾರೆ. ಹಲವು ವಿಷಯಗಳು ಸರಕಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಇಲ್ಲದಿರುವ ವಿಷಯವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದರೆ, ಇದು ಗೇಮ್ಸ್‌ನಲ್ಲಿ ಭಾಗವಹಿಸುವ ಇಲ್ಲವೇ ಬಹಿಷ್ಕರಿಸುವುದರಿಂದ ಅಂತ್ಯವಾಗುವುದಿಲ್ಲ. ದೇಶವೊಂದು ಗೇಮ್ಸ್‌ನ್ನು ಬಹಿಷ್ಕರಿಸುವುದು ಅತ್ಯಂತ ಕಠಿಣ ನಿರ್ಧಾರವಾಗುತ್ತದೆ’’ ಎಂದು ಬಾತ್ರಾ ಹೇಳಿದ್ದಾರೆ.

ವ್ಯವಸ್ಥಾಪನಾ ಸಮಸ್ಯೆಯ ಕಾರಣದಿಂದ 2022ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್‌ನ್ನು ಹೊರಗಿಡಲು ಬರ್ಮಿಂಗ್‌ಹ್ಯಾಮ್ ಸಂಘಟನಾ ಸಮಿತಿಯು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News