ಝ್ವೆರೆವ್ ಕ್ವಾರ್ಟರ್ ಫೈನಲ್‌ಗೆ

Update: 2018-04-19 18:55 GMT

ಮಾಂಟೆಕಾರ್ಲೊ, ಎ.19: ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ತನ್ನದೇ ದೇಶದ ಜಾನ್-ಲೆನಾರ್ಡ್ ಸ್ಟರ್ಫ್‌ರನ್ನು ಮೂರು ಸೆಟ್‌ಗಳ ಅಂತರದಿಂದ ಸೋಲಿಸಿ ಮಾಂಟೆಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. 20ರ ಹರೆಯದ ಝ್ವೆರೆವ್ ಕಳೆದ ಋತುವಿನಲ್ಲಿ ಎರಡು ಮಾಸ್ಟರ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಝ್ವೆರೆವ್ ಜರ್ಮನಿಯ ಲೆನಾರ್ಡ್‌ರನ್ನು 6-4, 4-6, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

ಅಂತಿಮ-8ರ ಹಂತದಲ್ಲಿ ಸಹೋದರ ಮಿಸ್ಚಾ ಅಥವಾ ರಿಚರ್ಡ್ ಗಾಸ್ಕಟ್‌ರನ್ನು ಎದುರಿಸಲಿದ್ದಾರೆ. ಬೆಲ್ಜಿಯಂನ ಆರನೇ ಶ್ರೇಯಾಂಕದ ಡೇವಿಡ್ ಗಫಿನ್ ಅವರು ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು 6-4, 7-5 ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ-8ರ ಹಂತ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News