ಐಪಿಎಲ್‌: ವಾಟ್ಸನ್ ಆಕರ್ಷಕ ಶತಕ; ಚೆನ್ನೈಗೆ ಭರ್ಜರಿ ಜಯ

Update: 2018-04-20 18:09 GMT

 ಪುಣೆ, ಎ.20: ದೀಪಕ್ ಚಹಾರ್(2-30), ಶಾರ್ದೂಲ್ ಠಾಕೂರ್(2-18),ಡ್ವೇಯ್ನ ಬ್ರಾವೊ(2-16) ಹಾಗೂ ಕರಣ್ ಶರ್ಮರ(2-13) ಸಂಘಟಿತ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್‌ನ 17ನೇ ಪಂದ್ಯದಲ್ಲಿ 64 ರನ್‌ಗಳಿಂದ ಸೋತಿದೆ.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 205 ರನ್ ಕಠಿಣ ಸವಾಲು ಪಡೆದ ರಾಜಸ್ಥಾನ ಯಾವ ಹಂತದಲ್ಲೂ ದಿಟ್ಟ ಹೋರಾಟ ನೀಡದೇ 18.3 ಓವರ್‌ಗಳಲ್ಲಿ 140 ರನ್‌ಗೆ ಆಲೌಟಾಯಿತು. 13ನೇ ಓವರ್‌ನಲ್ಲಿ 96 ರನ್‌ಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡ ರಾಜಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್(45,37 ಎಸೆತ) ಆಧಾರವಾದರು.

ಜೋಸ್ ಬಟ್ಲರ್ 22 ರನ್ ಗಳಿಸಿ ಬ್ರಾವೋಗೆ ವಿಕೆಟ್ ಒಪ್ಪಿಸಿದರು.

ಇದಕ್ಕೆ ಮೊದಲು ಆರಂಭಿಕ ಆಟಗಾರ ಶೇನ್ ವಾಟ್ಸನ್ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 205 ರನ್ ಗುರಿ ನೀಡಿತು.

ಟಾಸ್ ಜಯಿಸಿದ ರಾಜಸ್ಥಾನ ತಂಡದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು.

  ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ವಾಟ್ಸನ್ 51 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 100 ರನ್ ಪೂರೈಸಿದರು. 57 ಎಸೆತಗಳನ್ನು ಎದುರಿಸಿದ ಅವರು 106 ರನ್ ಗಳಿಸಿ ಔಟಾದರು.

ವಾಟ್ಸನ್ 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಶತಕ ಸಿಡಿಸಿದ 2ನೇ ಆರಂಭಿಕ ದಾಂಡಿಗ ಎನಿಸಿಕೊಂಡರು. ಕ್ರಿಸ್ ಗೇಲ್ ಗುರುವಾರ ಶತಕ ಸಿಡಿಸಿದ್ದರು.

ಚೆನ್ನೈ ಪರ ಇನಿಂಗ್ಸ್ ಆರಂಭಿಸಿದ ವಾಟ್ಸನ್ ಹಾಗೂ ಅಂಬಟಿ ರಾಯುಡು ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 50 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದಾರೆ. ರಾಯುಡು 12 ರನ್ ಗಳಿಸಿ ಔಟಾದಾಗ ಹಿರಿಯ ಆಟಗಾರ ರೈನಾ(46, 29 ಎಸೆತ, 9 ಬೌಂಡರಿ) ಜೊತೆಗೂಡಿ ಇನಿಂಗ್ಸ್ ಆಧರಿಸಿದ ವಾಟ್ಸನ್ ಎರಡನೇ ವಿಕೆಟ್‌ಗೆ 81 ರನ್ ಸೇರಿಸಿದರು. ರೈನಾ ಔಟಾದ ಬೆನ್ನಿಗೇ ನಾಯಕ ಎಂ.ಎಸ್. ಧೋನಿ(5) ಹಾಗೂ ಬಿಲ್ಲಿಂಗ್ಸ್(3) ಪೆವಿಲಿಯನ್‌ಗೆ ಪರೇಡ್ ನಡೆಸಿದರು.

ವಾಟ್ಸನ್ ವಿಂಡೀಸ್ ಆಲ್‌ರೌಂಡರ್ ಡ್ವೇಯ್ನ ಬ್ರಾವೊ(12) ಜೊತೆಗೂಡಿ 5ನೇ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು.

ಕರ್ನಾಟಕದ ಸ್ಪಿನ್ನರ್ ಎಸ್.ಗೋಪಾಲ್ ಅವರು ರೈನಾ, ಧೋನಿ ಹಾಗೂ ಬಿಲ್ಲಿಂಗ್ಸ್ ವಿಕೆಟ್ ಕಬಳಿಸಿ ಚೆನ್ನೈ ರನ್ ವೇಗಕ್ಕೆ ಕಡಿವಾಣ ಹಾಕಿದರು. ಗೋಪಾಲ್ 20 ರನ್‌ಗೆ 3 ವಿಕೆಟ್ ಉಡಾಯಿಸಿದರು. ಲಾಫ್ಲಿನ್ 38 ರನ್‌ಗೆ 2 ವಿಕೆಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News