ಇಂಗ್ಲೆಂಡ್ ಆಯ್ಕೆ ಸಮಿತಿಗೆ ಸ್ಮಿತ್ ನೇಮಕ

Update: 2018-04-20 18:40 GMT

ಲಂಡನ್, ಎ.20: ಇಂಗ್ಲೆಂಡ್ ಮಾಜಿ ದಾಂಡಿಗ ಎಡ್ ಸ್ಮಿತ್ ಅವರನ್ನು ತಂಡದ ನೂತನ ಆಯ್ಕೆಗಾರನಾಗಿ ನೇಮಿಸಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಶುಕ್ರವಾರ ಘೋಷಣೆ ಮಾಡಿದೆ. 40ರ ಹರೆಯದ ಸ್ಮಿತ್ 2008ರಲ್ಲಿ ನಿವೃತ್ತಿಯಾಗುವ ಮೊದಲು ಇಂಗ್ಲೆಂಡ್ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಮಾರ್ಚ್‌ನಲ್ಲಿ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತಂದ ಬಳಿಕ ಜೇಮ್ಸ್ ವಿಟೇಕರ್ ಆಯ್ಕೆಗಾರ ಹುದ್ದೆ ತ್ಯಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News