2019 ಲೋಕಸಭಾ ಚುನಾವಣೆ: ರಾಯ್ ಬರೇಲಿ, ಅಮೇಠಿಯಲ್ಲಿ ಕಾಂಗ್ರೆಸ್ ಗೆ ಬಿಎಸ್ ಪಿ ಸಾಥ್?

Update: 2018-04-21 08:54 GMT

ಲಕ್ನೋ, ಎ.21: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಹಾಗು ಅಮೇಠಿಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಈಗಾಗಲೇ ಸಿದ್ಧತೆ ನಡೆಸುತ್ತಿದ್ದರೆ, ಕೇಸರಿ ಪಕ್ಷವನ್ನು ಮಣಿಸಲು ಕಾಂಗ್ರೆಸ್ ಜೊತೆ ಬಿಎಸ್ ಪಿ ಕೈಜೋಡಿಸಲಿದೆ ಎನ್ನಲಾಗಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಎಸ್ ಪಿ  ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗಲಿದೆ ಎನ್ನಲಾಗಿದೆ. ಪಕ್ಷದ ಈ ನಡೆಯು ಮತವಿಭಜನೆಯಾಗುವುದನ್ನು ತಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷವು ಕಾಂಗ್ರೆಸನ್ನು ಬೆಂಬಲಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ನಿಕಟವರ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. 2004ರಿಂದ ಅಮೇಠಿಯಿಂದ ಹಾಗು 2009ರಿಂದ ರಾಯ್ ಬರೇಲಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಇದೀಗ ಬಿಎಸ್ ಪಿ ಕೂಡ ಬಿಜೆಪಿಯನ್ನು ಮಣಿಸಲು ಇದೇ ಕಾರ್ಯತಂತ್ರವನ್ನು ಕೈಗೊಳ್ಳಲಿದೆ ಎನ್ನಲಾಗಿದೆ.

“ಎಸ್ಪಿಯೊಂದಿಗೆ ಮೈತ್ರಿಯು ಸುಸೂತ್ರವಾಗಿ ನಡೆದರೆ ಪಕ್ಷವು ಅಮೇಠಿ ಹಾಗು ರಾಯ್ ಬರೇಲಿಯಲ್ಲಿ ಸ್ಪರ್ಧಿಸದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಮೂಲಕ ಪಕ್ಷವು ಕಾಂಗ್ರೆಸ್ ಗೆ ಹೆಚ್ಚು ಮತಗಳನ್ನು ಗಳಿಸಿಕೊಡಲಿದೆ” ಎಂದು ಹಿರಿಯ ಬಿಎಸ್ ಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News