ರಾಷ್ಟ್ರೀಯ ಬರಿಸ್ಟಾ ಚಾಂಪಿಯನ್ ಶಿಪ್-2018: ಗೀತು ಮೋಹಾನ್ನಿ ಪ್ಲಾಟಿನಮ್ ವಿಜೇತ

Update: 2018-04-21 15:58 GMT

ಬೆಂಗಳೂರು, ಎ.21: ಯುನೈಟೆಡ್ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ (ಯುಸಿಎಐ) ಹಾಗೂ ಕಾಫಿ ಬೋರ್ಡ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಬರಿಸ್ಟಾ ಚಾಂಪಿಯನ್ ಶಿಪ್ 2018 ನಲ್ಲಿ ಬೆಂಗಳೂರಿನ ಗೀತು ಮೋಹ್ನಾನಿ ಪ್ಲಾಟಿನಮ್ ವಿಜೇತರಾಗಿದ್ದಾರೆ.

ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ 29 ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದು, ಅಂತಿಮ ಸುತ್ತಿನಲ್ಲಿ ಥರ್ಡ್ ವೇವ್ ಕಾಫಿಯ ಗೀತು ವಿಜೇತರಾದರು. ಅಲ್ಲದೆ, ಬೆಂಗಳೂರಿನ ಗಿರೀಶ್ ಚಂದ್ರ ರನ್ನರ್ ಮತ್ತು ಗೋಲ್ಡ್ ರನ್ನರ್ ಆಗಿ ಹಾಗೂ ಮುಂಬೈನ ಮೇಘಾ ಪಾಂಡವ್ ಬೆಳ್ಳಿ ಮತ್ತು ಸಕಲೇಶಪುರದ ಪ್ರಸನ್ನಗುಡಿ ಕಂಚು ಗೆದ್ದುಕೊಂಡರು.

ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಲ್ಕೆಮಿ ಕಾಫಿ ರೋಸ್ಟರ್, ಥರ್ಡ್ ವೇವ್ ಕಾಫಿ, ಮೆಕ್ ಕೆಫೆ, ಕಾಫಿ ಮೆಕ್ಯಾನಿಕ್ಸ್, ಬ್ಲ್ಯೂ ಟೋಕಾಯ್ ಕಾಫಿ ರೋಸ್ಟರ್, ಬರಿಸ್ಟಾ, ಲಾವಾಜಾ, ಗ್ರೀನರ್ ಕಾಫಿ, ಹಾರ್ಲೇ ಎಸ್ಟೇಟ್, ಪರ್ಚ್-ಸನ್‌ರೈಸ್, ಮಿನರ್ವಾ ಕಾಫಿ, ಕರ್ಮಾ ಕಾಫಿ, ಎಕ್ಸೆಲ್ಸಿಯರ್, ಪರಿಮಳ ಕಾಫಿ, ಕೆಫೆಬಿಲಿಟಿ ಫೌಂಡೇಷನ್, ಇಂಡಿವಿಶುವಲ್ ಮುಂತಾದ ಸಂಸ್ಥೆಗಳು ಪಾಲ್ಗೊಂಡಿದ್ದವು.

ಸ್ಪರ್ಧೆಯ ತೀರ್ಪುಗಾರರ ಸಮಿತಿಯಲ್ಲಿ ಜೋ ಹ್ಸು, ಡಾ. ಕೆ. ಬಸವರಾಜ್, ಸುನೀಲ್‌ಪಿಂಟೊ, ಎಚ್.ಆರ್.ಸುಶಾಂತ್, ಕ್ರಮಕ್ ಖುರಾನಾ, ಜಸ್ಮೀತ್ ಭಾಸಿನ್ ಮತ್ತು ರಾಮ್ ಚೇತನ್ ಉಪಸ್ಥಿತರಿದ್ದರು. ರಾಷ್ಟ್ರೀಯ ಬರಿಸ್ಟಾ ಸ್ಪರ್ಧೆಯ ವಿಜೇತರು ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾರಿಸ್ಟಾ ಚಾಂಪಿಯಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News