ಸೈನಾ, ಸಿಂಧುಗೆ ತೆಲಂಗಾಣ ಸಿಎಂ ಸನ್ಮಾನ

Update: 2018-04-21 18:34 GMT

ತೆಲಂಗಾಣ, ಎ.21: ಇತ್ತೀಚೆಗೆ ಗೋಲ್ಡ್ ಕೋಸ್ಟ್‌ನಲ್ಲಿ ಕೊನೆಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸಹಿತ ಭಾರತದ ಇತರ 16 ಅಥ್ಲೀಟ್‌ಗಳನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೂಗುಚ್ಛ ಹಾಗೂ ಶಾಲು ಹೊದಿಸಿ ಗೌರವಿಸಿದ್ದಾರೆ.

ಸೈನಾ, ಸಿಂಧು ಅವರೊಂದಿಗೆ ಗೇಮ್ಸ್ ನಲ್ಲಿ ಭಾಗವಹಿಸಿರುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಅಥ್ಲೀಟ್‌ಗಳನ್ನು ರಾವ್ ಸನ್ಮಾನಿಸಿದ್ದಾರೆ.

ರಾವ್ ಅವರು ಕಿಡಂಬಿ ಶ್ರೀಕಾಂತ್(ಬ್ಯಾಡ್ಮಿಂಟನ್), ರಾನಿಕ್‌ರೆಡ್ಡಿ ಸಾತ್ವಿಕ್(ಬ್ಯಾಡ್ಮಿಂಟನ್),ಎನ್.ಸಿಕ್ಕಿ ರೆಡ್ಡಿ(ಬ್ಯಾಡ್ಮಿಂಟನ್),ಜಿ. ಋತ್ವಿಕ ಶಿವಾನಿ(ಬ್ಯಾಡ್ಮಿಂಟನ್), ಹಸಮುದ್ದೀನ್ ಮುಹಮ್ಮದ್(ಬಾಕ್ಸಿಂಗ್), ಅರುಣ್ ರೆಡ್ಡಿ(ಜಿಮ್ನಾಸ್ಟಿಕ್ಸ್),ಮೇಘನಾ ಗುಂಡ್ಲಾಪಾಳ್ಯ(ಜಿಮ್ನಾಸ್ಟಿಕ್ಸ್),ಕೀನನ್ ಚೆನಿ(ಶೂಟಿಂಗ್), ಗಗನ್ ನಾರಂಗ್(ಶೂಟಿಂಗ್), ಎಚ್‌ಎಸ್ ಪ್ರಣಯ್(ಬ್ಯಾಡ್ಮಿಂಟನ್), ಪ್ರಣವ್ ಚೋಪ್ರಾ(ಬ್ಯಾಡ್ಮಿಂಟನ್),ಚಿರಾಗ್ ಶೆಟ್ಟಿ(ಬ್ಯಾಡ್ಮಿಂಟನ್), ಅಶ್ವಿನಿ ಪೊನ್ನಪ್ಪ(ಬ್ಯಾಡ್ಮಿಂಟನ್),ಶರತ್ ಕಮಲ್(ಟೇಬಲ್ ಟೆನಿಸ್) ಹಾಗೂ ರಗಾಲ ವೆಂಕಟ್ ರಾಹುಲ್(ವೇಟ್‌ಲಿಫ್ಟಿಂಗ್) ಅವರನ್ನು ಗೌರವಿಸಿದರು.

ಭಾರತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಸಹಿತ ಒಟ್ಟು 66 ಪದಕಗಳನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News