ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ಗೆ ಉತ್ತಮ ತಂಡ ಆಯ್ಕೆ: ಅಹ್ಮದ್

Update: 2018-04-21 18:56 GMT

ಇಸ್ಲಾಮಾಬಾದ್, ಎ.21: ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರುಗಳಿರುವ ಉತ್ತಮ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನದ ನಾಯಕ ಸರ್ಫರಾಝ್ ಅಹ್ಮದ್ ಹೇಳಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಫವಾದ್ ಆಲಂರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ವಾಸಿಂ ಅಕ್ರಂ ಸಹಿತ ಪಾಕ್‌ನ ಮಾಜಿ ಟೆಸ್ಟ್ ಆಟಗಾರರು ಟೀಕಿಸಿದ್ದರು. ಮಿಸ್ಬಾವುಲ್‌ಹಕ್ ಹಾಗೂ ಯೂನಿಸ್‌ಖಾನ್ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಆಲಂಗೆ ತಂಡದಲ್ಲಿ ಸ್ಥಾನ ನೀಡಬೇಕಾಗಿತ್ತು ಎಂದು ಮಾಜಿ ಆಟಗಾರರು ಆಗ್ರಹಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆಲಂ 25 ಆಟಗಾರರನ್ನು ಒಳಗೊಂಡಿದ್ದ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಪಾಕ್ ತಂಡ ಹೊಸ ಮುಖಗಳಾದ ಉಸ್ಮಾನ್ ಸಲಾಹುದ್ದೀನ್ ಹಾಗೂ ಸಾದ್ ಅಲಿ,ಇನ್ನಷ್ಟೇ ಟೆಸ್ಟ್ ಪಂದ್ಯ ಆಡಬೇಕಾಗಿರುವ ಏಕದಿನ ಕ್ರಿಕೆಟ್ ಸ್ಪೆಷಲಿಸ್ಟ್ ಫಖರ್ ಝಮಾನ್ ಅವರಿಗೆ ಅವಕಾಶ ನೀಡಿದೆ. ಪಾಕಿಸ್ತಾನ ಡರ್ಬನ್‌ನಲ್ಲಿ ಐರ್ಲೆಂಡ್ ವಿರುದ್ಧ ಮೇ 11ರಂದು ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಮೇ 24 ರಿಂದ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News