ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ನಿಧನ

Update: 2018-04-22 17:02 GMT

ಟೋಕಿಯೊ,ಎ.22: ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆ ಸ್ಥಾಪಿಸಿದ್ದ ಜಪಾನ್‌ನ ವೃದ್ಧೆ ನಬಿ ತಜಿಮಾ ಶನಿವಾರ ನಿಧನರಾಗಿದ್ದಾರೆ. ಅವರಿಗೆ 117 ವರ್ಷ ವಯಸ್ಸಾಗಿತ್ತು.ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಜನವರಿ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಬಿ ತಾಜಿಮಾ ಅವರು ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ಕೊನೆಯುಸಿರೆಳೆದರೆಂದು ಕಿಕಾಯಿ ನಗರದ ಪೌರಾಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1900ನೇ ಇಸವಿಯ ಆಗಸ್ಟ್ 4ರಂದು ಜನಿಸಿದ್ದ ತಜಿಮಾ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ 160ಕ್ಕೂ ಅಧಿಕ ವಂಶಸ್ಥರನ್ನು ಹೊಂದಿದ್ದಾರೆ.

 ತಜಿಮಾ ಜಪಾನ್‌ನ ದಕ್ಷಿಣದ ತುದಿಯಲ್ಲಿರುವ ನಾಲ್ಕು ಪ್ರಮುಖ ದ್ವೀಪಗಳಲ್ಲೊಂದಾದ ಕ್ಯುಶುವಿನ ಕಿಕಾಯಿ ಪಟ್ಟಣದ ನಿವಾಸಿ.

ಏಳು ತಿಂಗಳುಗಳ ಹಿಂದೆ ಜಮೈಕಾದ ವೃದ್ಧೆ ವಾಯ್ಲೆಟ್ ಬ್ರೌನ್ ತನ್ನ 117 ವಯಸ್ಸಿನಲ್ಲಿ ನಿಧನರಾದ ಬಳಿಕ ತಜಿಮಾ ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆನಿಸಿದ್ದರು. ತಜಿಮಾ ಅವರ ನಿಧನದ ಬಳಿಕ 116 ವರ್ಷ ವಯಸ್ಸಿನ ಜಪಾನಿ ಮಹಿಳೆ ಚಿಯೊ ಯೊಶಿದಾ ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News