10 ಶತಕೋಟಿ ಡಾಲರ್ ಸಂಸ್ಥೆಯಾಗಿ ಹೊರಹೊಮ್ಮಿದ ಡಾ.ಬಿ.ಆರ್.ಶೆಟ್ಟಿಯವರ 'ಎನ್‍ಎಂಸಿ ಹೆಲ್ತ್'

Update: 2018-04-23 14:32 GMT

ಅಬುಧಾಬಿ, ಎ.23: ಅಬುಧಾಬಿ ಮೂಲದ ಎನ್‍ಎಂಸಿ ಹೆಲ್ತ್ 10 ಬಿಲಿಯನ್ ಡಾಲರ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರು 1974ರಲ್ಲಿ ಸ್ಥಾಪಿಸಿದ್ದ ಈ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯ ಕಳೆದ ಶುಕ್ರವಾರ ಲಂಡನ್ ನಲ್ಲಿ 10.8 ಬಿಲಿಯನ್ ಡಾಲರ್ ತಲುಪಿದೆ. ಇದು ದುಬೈಯಲ್ಲಿ ವಿಶ್ವದ ಅತ್ಯಂತ ಎತ್ತರದ ಕಟ್ಟಡ ನಿರ್ಮಿಸಿರುವ ಎಮಾರ್ ಪ್ರಾಪರ್ಟೀಸ್ ಇದರ ಮಾರುಕಟ್ಟೆ ಮೌಲ್ಯಕ್ಕಿಂತ 200 ಮಿಲಿಯನ್ ಡಾಲರ್ ಕಡಿಮೆಯಾಗಿದೆ.

ಎನ್‍ಎಂಸಿ ಹೆಲ್ತ್ ಇದೀಗ ಈ ಪ್ರದೇಶದ 25 ಈಕ್ವಿಟಿಗಳಲ್ಲೊಂದಾಗಿದ್ದು, ಅದರ ಮಾರುಕಟ್ಟೆ ಮಿತಿ 10 ಬಿಲಿಯನ್ ಡಾಲರ್ ಗಿಂತ ಅಧಿಕವಾಗಿದೆ. ಆರು ವರ್ಷಗಳ ಹಿಂದೆ ಸಂಸ್ಥೆ ಷೇರು ಮಾರುಕಟ್ಟೆಯುನ್ನು ಪ್ರವೇಶಿಸಿದಂದಿನಿಂದ ಆದರ ಮಾರ್ಕೆಟ್ ಕ್ಯಾಪ್ ಶೇ.1,650ರಷ್ಟು ಏರಿಕೆ ಕಂಡಿದೆ. ಅರಬ್ ಜಗತ್ತಿನ ಯಾವುದೇ ಕಂಪೆನಿ ಕೂಡ ಇಷ್ಟೊಂದು ಪ್ರಗತಿ ಸಾಧಿಸಿಲ್ಲ.

ಈ ಸಂಸ್ಥೆ  ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಎಫ್‍ಟಿಎಸ್‍ಇ 100 ಇಂಡೆಕ್ಸ್  ಭಾಗವಾಗಿ ಟ್ರೇಡಿಂಗ್ ಆರಂಭಿಸಿತ್ತು. 2013ರಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಗೊಂಡ ಕಂಪೆನಿಯೊಂದು ಇಷ್ಟು ಶೀಘ್ರ ಅವಧಿಯಲ್ಲಿ ಈ ಮಟ್ಟ ತಲುಪಿದ ಉದಾಹರಣೆ ವಿರಳವಾಗಿದೆ. ಆರಂಭದಲ್ಲಿ ಈ ಸಂಸ್ಥೆ ತನ್ನ ಶೇರುಗಳನ್ನು 210 ಪೆನ್ಸ್ ಗೆ ಮಾರಾಟ ಮಾಡಿದ್ದರೆ ಲಂಡನ್ ನಲ್ಲಿ ಎಪ್ರಿಲ್ 20ರಂದು ಅದರ ಷೇರು ಬೆಲೆ 3,688 ಪೆನ್ಸ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News