ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ‘ಡ್ಯೂಟಿ ಫ್ರೀ’ ಮಳಿಗೆಗಳು ಜಿಎಸ್‌ಟಿ ಮುಕ್ತವಲ್ಲ

Update: 2018-04-23 17:45 GMT

ಹೊಸದಿಲ್ಲಿ,ಎ.23: ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಮಳಿಗೆಗಳು ಹೊಸ ಜಿಎಸ್‌ಟಿ ವ್ಯವಸ್ಥೆಯಡಿ ಕರಮುಕ್ತವಲ್ಲ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್(ಎಎಆರ್)ನ ದಿಲ್ಲಿ ಪೀಠವು ಇತ್ತೀಚಿಗೆ ತೀರ್ಪು ನೀಡಿದೆ. ಇದರೊಂದಿಗೆ ಇನ್ನು ಮುಂದೆ ಇಂತಹ ಮಳಿಗೆಗಳಿಂದ ಸರಕುಗಳನ್ನು ಖರೀದಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಜಿಎಸ್‌ಟಿಯನ್ನು ಪಾವತಿಸುವುದು ಅನಿವಾರ್ಯವಾಗಲಿದೆ.

 2017,ಜು.1ರಂದು ಜಿಎಸ್‌ಟಿ ಜಾರಿಗೊಳ್ಳುವ ಮುನ್ನ ಡ್ಯೂಟಿ ಫ್ರೀ ಮಳಿಗೆಗಳಲ್ಲಿಯ ಮಾರಾಟವನ್ನು ರಫ್ತು ಮತ್ತು ಸರಕುಗಳು ಭಾರತದ ಕಸ್ಟಮ್ಸ್ ವ್ಯಾಪ್ತಿಯಿಂದ ಹೊರಕ್ಕೆ ಪೂರೈಕೆಯಾಗುತ್ತವೆ ಎಂದು ಪರಿಗಣಿಸಲಾಗುತ್ತಿದ್ದರಿಂದ ಇಂತಹ ಮಳಿಗೆಗಳಿಗೆ ಕೇಂದ್ರ ಮಾರಾಟ ತೆರಿಗೆ ಮತ್ತು ವೌಲ್ಯವರ್ಧಿತ ತೆರಿಗೆ(ವ್ಯಾಟ್)ಯಿಂದ ವಿನಾಯಿತಿ ನೀಡಲಾಗಿತ್ತು.

ಆದರೆ,ಡ್ಯೂಟಿ ಫ್ರೀ ಮಳಿಗೆಗಳಿಂದ ವಿದೇಶಗಳಿಗೆ ತೆರಳುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸರಕುಗಳು ಮಾರಾಟವಾಗುತ್ತಿರಬಹುದು ಮತ್ತು ಭಾರತದ ಕಸ್ಟಮ್ಸ್ ವ್ಯಾಪ್ತಿಯಿಂದ ಹೊರಗೆ ಪೂರೈಕೆಯಾಗುತ್ತಿರಬಹುದು. ಆದರೆ ಈ ಮಳಿಗೆಗಳು ಜಿಎಸ್‌ಟಿ ಕಾಯ್ದೆಯಡಿ ಭಾರತೀಯ ಭೂಪ್ರದೇಶದಲ್ಲಿಯೇ ಇವೆ. ಹೀಗಾಗಿ ಜಿಎಸ್‌ಟಿ ಸಂಗ್ರಹಿಸಲು ಅವು ಬದ್ಧವಾಗಿವೆ ಎಂದು ಎಎಆರ್ ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News