ಹೌದಿ ಕ್ಷಿಪಣಿಯನ್ನು ತುಂಡರಿಸಿದ ಸೌದಿ

Update: 2018-04-23 18:00 GMT
ಸಾಂದರ್ಭಿಕ ಚಿತ್ರ

ರಿಯಾದ್, ಎ. 23: ಯಮನ್‌ನ ಹೌದಿ ಬಂಡುಕೋರರು ರವಿವಾರ ಸೌದಿ ಅರೇಬಿಯದ ದಕ್ಷಿಣದ ಗಡಿ ನಗರ ನಜ್ರಾನ್‌ನತ್ತ ಕ್ಷಿಪಣಿಯೊಂದನ್ನು ಹಾರಿಸಿದ್ದಾರೆ ಎಂದು ಸೌದಿ ಅರೇಬಿಯದ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಕ್ಷಿಪಣಿಯನ್ನು ಸೌದಿ ವಾಯು ರಕ್ಷಣೆ ವ್ಯವಸ್ಥೆಯು ಆಕಾಶದಲ್ಲೇ ತುಂಡರಿಸಿದೆಯಾದರೂ, ಕೆಳಗೆ ಬಿದ್ದ ಅವಶೇಷಗಳಿಂದಾಗಿ ತೋಟವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ.

‘‘ಕ್ಷಿಪಣಿಯನ್ನು ತುಂಡರಿಸುವಲ್ಲಿ ಸೌದಿ ಪಡೆಗಳು ಯಶಸ್ವಿಯಾದವು. ಆದರೆ, ಕ್ಷಿಪಣಿಯ ಅವಶೇಷಗಳು ಜನವಸತಿ ಪ್ರದೇಶದಾದ್ಯಂತ ಹರಡಿದವು ಹಾಗೂ ನಾಗರಿಕರೊಬ್ಬರಿಗೆ ಸೇರಿದ ತೋಟವೊಂದಕ್ಕೆ ಬೆಂಕಿ ಹೊತ್ತಿಕೊಂಡಿತು. ಆದರೆ, ಯಾವುದೇ ಸಾವು-ನೋವು ಸಂಭವಿಸಲಿಲ್ಲ’’ ಎಂದು ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟದ ಮೂಲಗಳನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News