ಲಂಕಾದ ಹಂಬನ್‌ತೋಟ ಬಂದರಿನಲ್ಲಿ ಸೇನಾ ನೆಲೆಯಿಲ್ಲ: ಚೀನಾ

Update: 2018-04-23 18:27 GMT

ಕೊಲಂಬೊ, ಎ. 23: ಶ್ರೀಲಂಕಾದ ದಕ್ಷಿಣದ ಹಂಬನ್‌ತೋಟ ಬಂದರನ್ನು ಸೇನಾ ನೆಲೆಯನ್ನಾಗಿ ಮಾಡಲಾಗುವುದು ಎಂಬ ವರದಿಗಳನ್ನು ಚೀನಾ ಸೋಮವಾರ ನಿರಾಕರಿಸಿದೆ. ಈ ಬಂದರು, ಆರ್ಥಿಕ ಅಭಿವೃದ್ಧಿಗಾಗಿ ಕೊಲಂಬೊ ಜೊತೆಗೆ ಬೀಜಿಂಗ್ ಮಾಡಿಕೊಂಡಿರುವ ಸಹಕಾರ ಒಪ್ಪಂದದ ಒಂದು ಭಾಗವಾಗಿದೆ ಎಂದಿದೆ.

ಇತ್ತೀಚೆಗೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ್‌ಸಿಂಘೆಯನ್ನು ಭೇಟಿಯಾದ ವೇಳೆ ಚೀನಾ ರಾಯಭಾರಿ ಚೆಂಗ್ ಕ್ಸೆಯುವನ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಕೊಲಂಬೊದಲ್ಲಿರುವ ಚೀನಾ ರಾಯಭಾರ ಕಚೇರಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

ಆರ್ಥಿಕ ಜಾಗತೀಕರಣವನ್ನು ಚೀನಾ ಎತ್ತಿಹಿಡಿಯುತ್ತದೆ ಹಾಗೂ ಶ್ರೀಲಂಕಾದೊಂದಿಗಿನ ಬಾಂಧವ್ಯಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎಂಬುದಾಗಿ ಚೀನಾ ರಾಯಭಾರಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

 ‘‘ಹಂಬನ್‌ತೋಟವನ್ನು ಚೀನಾವು ಸೇನಾ ನೆಲೆಯನ್ನಾಗಿ ಮಾಡುವುದು ಎಂಬ ಇತ್ತೀಚಿನ ಆಧಾರರಹಿತ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಚೀನಾ ರಾಯಭಾರಿ, ಚೀನಾದೊಂದಿಗಿನ ಸ್ನೇಹಯುತ ಹಾಗೂ ವಾಸ್ತವಿಕ ಸಹಕಾರದಲ್ಲಿ ಯಾವುದೇ ಸೇನಾ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News