ದಕ್ಷಿಣ ಏಷ್ಯಾ ಸೀನಿಯರ್ ಜುಡೊ ಚಾಂಪಿಯನ್‌ಶಿಪ್: ಭಾರತಕ್ಕೆ 10 ಚಿನ್ನ

Update: 2018-04-23 18:44 GMT

ನೇಪಾಳ, ಎ.23: ಸೌತ್ ಏಷ್ಯಾ ಜುಡೊ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 10 ಚಿನ್ನ ಮತ್ತು 3 ಕಂಚು ಬಾಚಿಕೊಂಡಿದೆ.

ನೇಪಾಳದ ಲಲಿತ್‌ಪುರದಲ್ಲಿ ಎ.20ರಿಂದ 22ರ ತನಕ ನಡೆ 8ನೇ ದಕ್ಷಿಣ ಏಷ್ಯಾ ಸೀನಿಯರ್ ಜುಡೊ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಭಾರತದ 7 ಮಹಿಳೆಯರ ಪೈಕಿ ಎಲ್ಲರೂ ತಲಾ 1 ಚಿನ್ನ ಪಡೆದರು. 6 ಮಂದಿ ಪುರುಷರ ಪೈಕಿ 3 ಮಂದಿ ಚಿನ್ನ ಮತ್ತು ಮೂವರು ಕಂಚು ಪಡೆದರು.

ಮಹಿಳೆಯರ ವಿಭಾಗದಲ್ಲಿ ಎಲ್.ಸುಶೀಲಾ ದೇವಿ(48 ಕೆ.ಜಿ), ಥೊಂಡಮ್ ಕಲ್ಪನಾ ದೇವಿ(52 ಕೆ.ಜಿ), ಅನ್ಗಮ್ ಅನಿತಾ ಚಾನು(57 ಕೆ.ಜಿ) , ಹುಯ್‌ಡ್ರಾಮ್ ಸುನಿಬಾಲಾ ದೇವಿ(63 ಕೆ.ಜಿ), ಗರೀಮಾ ಚೌಧರಿ (70 ಕೆ.ಜಿ), ಚೊಂಗ್‌ಥಾಮ್ ಜಿನಾ ದೇವಿ(78 ಕೆ.ಜಿ), ಮತ್ತು ತುಲಿಕಾ ಮಾನ್ (78 ಕೆ.ಜಿ) ಚಿನ್ನ ಗೆದ್ದರು.

ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಜಯ್ ಕುಮಾರ್ ಯಾದವ್(60 ಕೆ.ಜಿ), ಅಜಯ್ ಯಾದವ್(73 ಕೆ.ಜಿ) ಮತ್ತು ದಿವೇಶ್ (81 ಕೆ.ಜಿ) ಚಿನ್ನ ಜಯಿಸಿದರು. ಅಂಕಿತ್ ಬಿಸ್ತ್(66 ಕೆ.ಜಿ), ಜೊಬಾನ್‌ದೀಪ್ ಸಿಂಗ್(90 ಕೆ.ಜಿ) ಮತ್ತು ಉದಯ್‌ವೀರ್ ಸಿಂಗ್(100 ಕೆ.ಜಿ) ಕಂಚು ಪಡೆದರು.

2014ರಲ್ಲಿ ನಡೆದ ಕೂಟದಲ್ಲೂ ಭಾರತ 10 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News