ಚೆಂಡು ಬಿಸಿಸಿಐ ಅಂಗಣದಲ್ಲಿದೆ: ನಜೀಮ್ ಸೇಥಿ

Update: 2018-04-23 18:47 GMT

ಕೋಲ್ಕತಾ, ಎ.23: ಬಿಸಿಸಿಐ ಹೆಚ್ಚಿನ ಆಸಕ್ತಿ ವಹಿಸಿದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜಿಸಲು ಸಾಧ್ಯ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜೀಮ್ ಸೇಥಿ ಹೇಳಿದ್ದಾರೆ.

ನೆರೆಹೊರೆಯ ದೇಶಗಳಾದ ಭಾರತ-ಪಾಕಿಸ್ತಾನ ನಡುವೆ ಸಾಮಾಜಿಕ ಮತ್ತು ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಬಂಧ ಪುನರಾರಂಭಕ್ಕೆ ಸಮಸ್ಯೆ ಉಂಟಾಗಿದೆ. ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಮಾತ್ರ ಬಿಸಿಸಿಐಗೆ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯ.ಆದರೆ ಎರಡೂ ದೇಶಗಳು ದ್ವಿಪಕ್ಷೀಯ ಸರಣಿಯಲ್ಲಿ ಆಡದಿದ್ದರೂ, 50 ಓವರ್‌ಗಳ ವಿಶ್ವಕಪ್, ಟ್ವೆಂಟಿ-20 ವಿಶ್ವಕಪ್, ಏಷ್ಯಾ ಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಮುಖಾಮುಖಿಯಾಗಿವೆೆ. ಎಂದು ಸೇಥಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News