ಸಚಿನ್ ಹುಟ್ಟುಹಬ್ಬದ ದಿನ ಟ್ವೀಟ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಅಭಿಮಾನಿಗಳ ಆಕ್ರೋಶ

Update: 2018-04-24 10:51 GMT

ಹೊಸದಿಲ್ಲಿ, ಎ.24: ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವಾದ ಇಂದು ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು, ಕ್ರಿಕೆಟಿಗರು ಕ್ರಿಕೆಟ್ ದಿಗ್ಗಜನಿಗೆ ಶುಭ ಹಾರೈಸುತ್ತಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ಮಾಡಿದ ಟ್ವೀಟೊಂದು ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿನ್ ಹುಟ್ಟಿದ ದಿನವಾದ ಇಂದು ಆಸ್ಟ್ರೇಲಿಯಾದ ಬೌಲರ್ ಡೇಮಿಯನ್ ಫ್ಲೆಮಿಂಗ್ ರ ಹುಟ್ಟುಹಬ್ಬವೂ ಹೌದು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಡೇಮಿಯನ್ ಅವರಿಗೆ ಶುಭಕೋರಿ ಮಾಡಿದ್ದ ಟ್ವೀಟ್ ನಲ್ಲಿ ಕೀಟಲೆ ಮಾಡಿತ್ತು. ಡೇಮಿಯನ್ ಬಾಲ್ ಗೆ ಸಚಿನ್ ಕ್ಲೀನ್ ಬೌಲ್ಡ್ ಆದ ವಿಡಿಯೋವನ್ನು ಅದು ಪೋಸ್ಟ್ ಮಾಡಿತ್ತು.

ಡೇಮಿಯನ್ ಹುಟ್ಟುಹಬ್ಬದ ದಿನ ಅವರ ಅದ್ಭುತ ಬೌಲಿಂಗ್ ನ ವಿಡಿಯೋ ಪೋಸ್ಟ್ ಮಾಡಿದ್ದು ಸರಿಯಾದರೂ ಕ್ರಿಕೆಟ್ ಕಂಡ ಅತ್ಯದ್ಭುತ ಕ್ರಿಕೆಟರ್ ಸಚಿನ್ ಹುಟ್ಟುಹಬ್ಬದ ದಿನ ಅವರು ಬೌಲ್ಡ್ ಆದ ವಿಡಿಯೋ ಹಾಕಿ ಆಸ್ಟ್ರೇಲಿಯಾ ತನ್ನ ಎಂದಿನ ಚಾಳಿ ಮುಂದುವರಿಸಿದೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದರು.

“ಎಷ್ಟು ನಿಷೇಧಗಳಾದರೂ, ಆಸ್ಟ್ರೇಲಿಯಾ ಬದಲಾಗುವುದಿಲ್ಲ”. “ನಿಮಗೆ ತಲೆ ಸರಿಯಿಲ್ಲವೇ?”, “1998ರಲ್ಲಿ ಸಚಿನ್ ಆಸ್ಟ್ರೇಲಿಯನ್ನರ ಬೌಲಿಂಗನ್ನು ಪುಡಿಗಟ್ಟಿದ್ದರು”, “ನಿಮಗೆ ನಾಚಿಕೆಯಾಗಬೇಕು ಕ್ರಿಕೆಟ್ ಆಸ್ಟ್ರೇಲಿಯಾ”..ಹೀಗೆ ಸಾಲು ಸಾಲು ಟ್ವೀಟ್ ಗಳ ಮೂಲಕ ಟ್ವಿಟರಿಗರು ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News