ಆಫ್ರಿಕ ಟ್ವೆಂಟಿ-20 ತಂಡದಿಂದ ತ್ರೀಶಾ ಚೆಟ್ಟಿ ಹೊರಕ್ಕೆ

Update: 2018-04-24 18:55 GMT

ಜೋಹಾನ್ಸ್‌ಬರ್ಗ್,ಎ.24: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ದಕ್ಷಿಣ ಆಫ್ರಿಕ ಮಹಿಳಾ ತಂಡದಿಂದ ತ್ರೀಶಾ ಚೆಟ್ಟಿ ಅವರನ್ನು ಕೈ ಬಿಡಲಾಗಿದೆ. ಆದರೆ ಅವರು ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ

  ತಾಂಝ್ಮಿನ್ ಬ್ರಿಟ್ಸ್ ಮತ್ತು ಸ್ಟೇಸಿ ಲಾಕೇ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಟ್ಸ್ ಅವರು ದಕ್ಷಿಣ ಆಫ್ರಿಕದ ಉದಯೋನ್ಮುಖ ಆಟಗಾರ್ತಿಯರ ತಂಡದ ನಾಯಕಿಯಾಗಿದ್ದಾರೆ. ಅವರು ಇತ್ತೀಚೆಗೆ ನಡೆದ ಮೂರು ರಾಷ್ಟ್ರಗಳ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. ಆಫ್ ಸ್ಪಿನ್ ಆಲ್‌ರೌಂಡರ್ ಸ್ಟೇಸಿ ಅವರು ಶತಕ ದಾಖಲಿಸಿ ವೆಸ್ಟರ್ನ್ ಪ್ರಾವಿನ್ಸ್ ರಾಷ್ಟ್ರೀಯ ಮಹಿಳಾ ತಂಡದ ಗೆಲುವಿಗೆ ನೆರವಾಗಿದ್ದರು. ಬಾಂಗ್ಲಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಮೇ 4ರಂದು ಆರಂಭಗೊಳ್ಳಲಿದೆ. ಟ್ವೆಂಟಿ-20 ಸರಣಿ ಮೇ 17ರಿಂದ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News