ವೇಗಿ ಸ್ಟ್ಯಾನ್‌ಲೇಕ್ ಐಪಿಎಲ್‌ನಿಂದ ಔಟ್

Update: 2018-04-24 18:56 GMT

ಹೊಸದಿಲ್ಲಿ, ಎ.24: ಸನ್‌ರೈಸರ್ಸ್ ಹೈದರಾಬಾದ್ ಮಂಗಳವಾರ ತೀವ್ರ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಬಿಲ್ಲಿ ಸ್ಟಾನ್‌ಲೇಕ್ ಗಾಯಗೊಂಡ ಕಾರಣ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಎ.22 ರಂದು ಹೈದರಾಬಾದ್‌ನಲ್ಲಿ ಚೆನ್ನೈ ವಿರುದ್ಧ ಪಂದ್ಯದ ವೇಳೆ ಆಸ್ಟ್ರೇಲಿಯದ ಸ್ಟಾನ್‌ಲೇಕ್‌ಗೆ ಬಲಗೈ ಬೆರಳು ಗಾಯವಾಗಿದ್ದು, ವಿಶ್ರಾಂತಿ ಪಡೆಯುವಂತೆ ಭಾರತ ಹಾಗೂ ಆಸ್ಟ್ರೇಲಿಯ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಸ್ಟಾನ್‌ಲೇಕ್ ಹೆಚ್ಚಿನ ಚಿಕಿತ್ಸೆಗೆ ಸ್ವದೇಶಕ್ಕೆ ವಾಪಸಾಗಲಿದ್ದು, ಈ ವರ್ಷದ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News