ನಾಲ್ವರು ಅಧಿಕಾರಿಗಳಿಗೆ ಭಡ್ತಿ; ಸ್ಥಳ ನಿಯುಕ್ತಿ
Update: 2018-04-25 20:21 IST
ಬೆಂಗಳೂರು, ಎ. 25: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಂಭಡ್ತಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳಿಗೆ ಭಡ್ತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.
ಎಸ್.ಎಲ್.ಚಂದ್ರಶೇಖರ್-ಅಧೀನ ಕಾರ್ಯದರ್ಶಿ-ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗೋಪಿಚಂದ್ರ ಎಸ್.-ಅಧೀನ ಕಾರ್ಯದರ್ಶಿ- ಆರ್ಥಿಕ ಇಲಾಖೆ, ಅಮರೇಶ್-ಅಧೀನ ಕಾರ್ಯದರ್ಶಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಶಿವಶರಣಪ್ಪ ಪಾಟೀಲ್-ಅಧೀನ ಕಾರ್ಯದರ್ಶಿ-ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ನಿಯೋಜನೆ ಮಾಡಲಾಗಿದೆ.
ಆರ್.ನಾಗರಾಜ್ ಅವರನ್ನು ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಸ್ಥಾನಕ್ಕೆ ಭಡ್ತಿ ನೀಡಿ, ಸ್ಥಳ ನಿಯುಕ್ತಿ ಮಾಡಲಾಗಿದೆ. ಮೇಲ್ಕಂಡ ಎಲ್ಲ ಹುದ್ದೆಗಳನ್ನು ಭಡ್ತಿಯಿಂದ ತೆರವಾಗುವ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.