2019 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟ

Update: 2018-04-26 16:57 GMT

ಕೋಲ್ಕತಾ, ಎ.26: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್ ಕ್ರಿಕೆಟ್‌ನ ವೇಳಾಪಟ್ಟಿ ಗುರುವಾರ ಪ್ರಕಟಗೊಂಡಿದೆ.

    2019 ಮೇ 30ರಿಂದ ಜುಲೈ 14ರ ತನಕ ನಡೆಯಲಿರುವ ಟೂರ್ನಮೆಂಟ್‌ನ ಲ್ಲಿ ಭಾರತ ಜೂ.5ರಂದು ಸೌತ್‌ಹ್ಯಾಂಪ್ಟನ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ.

 ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ ಎದುರಿಸಲಿದೆ. 46 ದಿನಗಳ ನಡೆಯಲಿರುವ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿ 45 ಪಂದ್ಯಗಳು ನಿಗದಿಯಾಗಿದೆ.

ಜೂ.30ರಂದು ಓವಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ನ್ನು ದಕ್ಷಿಣ ಆಫ್ರಿಕ ಎದುರಿಸಲಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಮೇ 30ರಂದು ಅಫ್ಘಾನಿಸ್ತಾನ ವಿರುದ್ಧ ಅಭಿಯಾನ ಆರಂಭಿಸಲಿದೆ.

10 ರಾಷ್ಟ್ರಗಳು ಭಾಗವಹಿಸಲಿದೆ: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ವೆಸ್ಟ್‌ಇಂಡೀಸ್ ತಂಡಗಳು ಭಾಗವಹಿಸಲಿವೆ.

ಲಾರ್ಡ್ಸ್, ಓವಲ್,ಚೆಸ್ಟರ್-ಲೆ ಸ್ಟ್ರೀಟ್, ಎಡ್ಜ್‌ಬ್ಯಾಸ್ಟನ್, ಟ್ರೆಂಟ್ ಬ್ರಿಡ್ಜ್, ಹೆಡಿಂಗ್ಲೆ, ಕಾರ್ಡಿಫ್, ಸೌತಾಂಪ್ಟನ್, ಬ್ರಿಸ್ಟಲ್, ಓಲ್ಡ್ ಟಾಫೋರ್ಡ್, ಟೌನ್‌ಟನ್ ಸೇರಿದಂತೆ 11 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದೆ.

ಫೈನಲ್ ಪಂದ್ಯ ಲಾರ್ಡ್ಸ್‌ನಲ್ಲಿ ಐದನೇ ಬಾರಿ ಫೈನಲ್ ನಡೆಯಲಿದೆ. ಫೈನಲ್ ಜುಲೈ 14ರಂದು ನಿಗದಿಯಾಗಿದೆ. ಓರ್ಲ್ಡ್ ಟ್ರಾಫರ್ಡ್ ಮತ್ತು ಎಡ್ಜ್‌ಬ್ಯಾಸ್ಟನ್‌ನಲ್ಲಿ ಜು.9ರಿಂದ 11ರ ತನಕ ನಡೆಯಲಿದೆ.

ಭಾರತದ ಪಂದ್ಯಗಳ ವೇಳಾ ಪಟ್ಟಿ

ಜೂ.05: ಭಾರತ-ದ.ಆಫ್ರಿಕ

ಜೂ.09: ಭಾರತ-ಆಸ್ಟ್ರೇಲಿಯ

ಜೂ.13: ಭಾರತ -ನ್ಯೂಝಿಲೆಂಡ್

ಜೂ.16: ಭಾರತ-ಪಾಕಿಸ್ತಾನ

ಜೂ.22:ಭಾರತ-ಅಫ್ಘಾನಿಸ್ತಾನ

ಜೂ.27: ಭಾರತ-ವೆಸ್ಟ್‌ಇಂಡೀಸ್

ಜೂ.30: ಭಾರತ-ಇಂಗ್ಲೆಂಡ್

ಜು.02 : ಭಾರತ-ಬಾಂಗ್ಲಾದೇಶ

ಜು.06: ಭಾರತ-ಶ್ರೀಲಂಕಾ

,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News