ಕುವೈತ್ ತೊರೆಯುವಂತೆ ಫಿಲಿಪ್ಪೀನ್ಸ್ ರಾಯಭಾರಿಗೆ ಸೂಚನೆ

Update: 2018-04-26 17:06 GMT

ಕುವೈತ್ ಸಿಟಿ, ಎ. 26: ಫಿಲಿಪ್ಪೀನ್ಸ್ ರಾಯಭಾರಿಯನ್ನು ‘ಅನಪೇಕ್ಷಿತ ವ್ಯಕ್ತಿ’ ಎಂದು ಘೋಷಿಸಲಾಗಿದ್ದು, ಒಂದು ವಾರದಲ್ಲಿ ದೇಶ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಕುವೈತ್ ವಿದೇಶ ಸಚಿವಾಲಯ ಬುಧವಾರ ತಿಳಿಸಿದೆ.

ಕುವೈತ್‌ನ ಮನೆಗಳಿಂದ ಇಬ್ಬರು ಫಿಲಿಪ್ಪೀನ್ಸ್ ಮನೆಗೆಲಸದ ಮಹಿಳೆಯರನ್ನು ವಾಪಸ್ ಕಳುಹಿಸಿದ ಘಟನೆಗೆ ಸಂಬಂಧಿಸಿದಂತೆ ಈ ಬೆಳವಣಿಗೆ ಸಂಬಂಧಿಸಿದೆ.

ಅದೇ ವೇಳೆ, ಫಿಲಿಪ್ಪೀನ್ಸ್‌ಗೆ ಕುವೈತ್ ರಾಯಭಾರಿಯನ್ನು ಸಮಾಲೋಚನೆಗಾಗಿ ಕುವೈತ್ ವಾಪಸ್ ಕರೆಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News