ಜೆಎನ್‍ಯುನಲ್ಲಿ 'ಲವ್‍ಜಿಹಾದ್' ಸಿನೆಮಾ ಕುರಿತ ವಿವಾದ: ವಿದ್ಯಾರ್ಥಿಗಳ ನಡುವೆ ಹೊಡೆದಾಟ

Update: 2018-04-28 17:12 GMT

ಹೊಸದಿಲ್ಲಿ, ಎ.28: ದಿಲ್ಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಲವ್‍ಜಿಹಾದ್ ಕುರಿತ ಸಿನೆಮಾ ಪ್ರದರ್ಶನದ ವೇಳೆ ಹೊಡೆದಾಟ ನಡೆದಿದ್ದು,  ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

ಜೆಎನ್‍ಯು ಕ್ಯಾಂಪಸ್‍ನಲ್ಲಿ ವಿವೇಕಾನಂದ ವಿಚಾರ ಮಂಚ್ 'ಇನ್ ದಿ ನೇಮ್ ಆಫ್ ಲವ್' ಎನ್ನುವ ಸಿನೆಮಾ ಪ್ರದರ್ಶನ ಆಯೋಜಿಸಿದ್ದ ವೇಳೆ ಹೊಡೆದಾಟ ನಡೆದಿದೆ. ಸಿನೆಮಾದ ಸ್ಕ್ರೀನಿಂಗ್‍ನ್ನು ಜೆಎನ್‍ಯು ಸ್ಟೂಡೆಂಟ್ ಯೂನಿಯನ್ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ವಿರೋಧಿಸಿದ್ದರು. ಆ ನಂತರ ಎರಡೂ ಕಡೆಯಿಂದ ಹೊಡೆದಾಟ ನಡೆದಿದೆ.

ಇದೇ ವೇಳೆ ಎಬಿವಿಪಿ ಕಾರ್ಯಕರ್ತರು ತಮ್ಮ ವಿರುದ್ಧ ಹಲ್ಲೆ ಎಸಗಿದ್ದಾರೆ ಎಂದು ಜೆಎನ್‍ಯು ವಿದ್ಯಾರ್ಥಿ ಸಂಘ  ಆರೋಪಿಸಿದೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸಿದರು ಮತ್ತು ಹಲ್ಲೆ ನಡೆಸಿದ್ದಾರೆ. ಜೆಎನ್‍ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮೋಹಿತ್ ಪಾಂಡ್ಯ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಎಬಿವಿಪಿಯ ಸೌರಭ್ ಶರ್ಮ ದೂರು ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಉಭಯ ಬಣದ ದೂರನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News