ಸ್ಯಾಮ್ಸನ್ ದಾಖಲೆ ಸರಿಗಟ್ಟಿದ ಶಾ

Update: 2018-04-28 18:39 GMT

ಹೊಸದಿಲ್ಲಿ, ಎ.28: ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತ್ತು.

    ಈ ಗೆಲುವಿಗೆ ನೂತನ ನಾಯಕ ಶ್ರೇಯಸ್(93) ಮತ್ತು ಯುವ ಆಟಗಾರ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಮೂಲಕ ನೆರವಾಗಿದ್ದರು. ಶಾ 44 ಎಸೆತಗಳಲ್ಲಿ 62 ರನ್‌ಗಳ ಕೊಡುಗೆ ನೀಡಿದ್ದರು. ವಿಶ್ವಕಪ್ ಜಯಿಸಿದ ಅಂಡರ್-19 ತಂಡದ ನಾಯಕ ಶಾ ಅವರು ಈ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. ಐಪಿಎಲ್‌ನಲ್ಲಿ ಅರ್ಧಶತಕ ದಾಖಲಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2013ರಲ್ಲಿ ಸಂಜು ಸ್ಯಾಮ್ಸನ್ ಮಾಡಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಂಜು ಸ್ಯಾಮ್ಸನ್ ಅರ್ಧಶತಕ ದಾಖಲಿಸುವಾಗ ಅವರ ವಯಸ್ಸು 18 ವರ್ಷ ಮತ್ತು 169 ದಿನಗಳು. ಇದೀಗ ಅವರ ದಾಖಲೆ ಸರಿಗಟ್ಟಿರುವ ಶಾ ವಯಸ್ಸು 18 ವರ್ಷ ಮತ್ತು 169 ದಿನಗಳು ಎನ್ನುವುದು ಇಲ್ಲಿ ವಿಶೇಷ. ಐಪಿಎಲ್‌ನಲ್ಲಿ ಅರ್ಧಶತಕ ದಾಖಲಿಸಿದ ಐವರು ಕಿರಿಯ ಆಟಗಾರರ ವಿವರ ಇಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News