ಕೆಸಿಎಫ್ ಒಮಾನ್: 'ಇನ್ಸ್ಪಿರಾ-18' ಕಾರ್ಯಕರ್ತರ ಶಿಬಿರ

Update: 2018-04-30 10:05 GMT

ಮಸ್ಕತ್, ಎ. 30: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕಾರ್ಯಕರ್ತರ ತರಬೇತಿ ಶಿಬಿರವು ಬರ್ಕ ಅಲ್ ಫವಾನ್ ಅಡಿಟೋರಿಯಮ್ ನಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸ್ ಎಮ್ಮೆಮ್ಮಾಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೆಸಿಎಫ್ ಒಮಾನ್ ಗೌರವಾಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರು ರವರ ದುಆಃದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮುಹಮ್ಮದ್ ಅಲಿ ಮುಸ್ಲಿಯಾರ್ ಮೋಂಟುಗೋಳಿ ಖಿರಾಅತ್ ಪಠಿಸಿದರು.

ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಕುಡ್ತಮುಗೇರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಕೆಸಿಎಫ್ ಉರ್ದು ವಿಭಾಗದ ಮುಖ್ಯಸ್ಥರಾದ ಶಾಕೀರ್ ಮೌಲಾನ ಹೂಡೆ ಉದ್ಘಾಟಿಸಿದರು. ಮುಖ್ಯ ತರಬೇತುದಾರರಾಗಿ ಆಗಮಿಸಿದ್ದ ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಉಮರ್ ಸಖಾಫಿ ಎಡಪಾಲ್ ಕೊಡಗು ಮಾತನಾಡಿ, ಉತ್ತಮ ಕಾರ್ಯಕರ್ತನಲ್ಲಿರಬೇಕಾದ ಗುಣ ನಡತೆಗಳು ಹಾಗೂ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಿವವರಿಸಿದರು.

ಮುಖ್ಯ ಅತಿಥಿಗಳಾಗಿ ಐಸಿಎಫ್ ಬರ್ಕ ಸೆಂಟ್ರಲ್ ಝೋನ್ ಅಧ್ಯಕ್ಷರಾದ ಇಸ್ಮಾಈಲ್ ಸಖಾಫಿ, ಆರ್.ಎಸ್.ಸಿ ಬರ್ಕ ಸೆಂಟ್ರಲ್ ಅಧ್ಯಕ್ಷರಾದ ಜಮಾಲುದ್ದೀನ್ ಲತೀಫಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಐ.ಎನ್.ಸಿ ಮುಖಂಡರಾದ ಇಕ್ಬಾಲ್ ಬೊಳ್ಮಾರ್, ಇಹ್ಸಾನ್ ಅಧ್ಯಕ್ಷರಾದ ಸಮೀರ್ ಉಸ್ತಾದ್, ಸಂಘಟನಾ ವಿಭಾಗದ ಹಂಝ ಹಾಜಿ ಕನ್ನಂಗಾರ್, ಕೋಶಾಧಿಕಾರಿ ಕಾಸಿಂ ಹಾಜಿ ಅಳಕೆಮಜಲು, ಡಿಕೆಎಸ್ಸಿ ಅಧ್ಯಕ್ಷರಾದ ಝುಬೈರ್ ಸಅದಿ ಪಾಟ್ರಕೋಡಿ, ಮುಖಂಡರಾದ ಉಬೈದ್ ಸಖಾಫಿ ಮಿತ್ತೂರು, ಆರಿಫ್ ಕೋಡಿ, ಅಯ್ಯೂಬ್ ಕೋಡಿ, ಸಂಶುದ್ದೀನ್ ಕಡಬ, ಝೋನ್ ನಾಯಕರಾದ ಹುಸೈನ್ ಸಖಾಫಿ, ಅಬ್ದುಲ್ ಮಜೀದ್ ಅಮಾನಿ, ಬಾಷಾ ನಿಝ್ವ, ಇಬ್ರಾಹಿಂ ಹಾಜಿ ಅತ್ರಾಡಿ, ಸಿದ್ದೀಕ್ ಮಾಂಬ್ಲಿ ,ಝಾಕಿರ್, ಸ್ವಾದಿಕ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಝೋನ್ ಗಳಿಂದ ಸುಮಾರು 150ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಮೊದಲು ಸ್ವಾದಿಕ್ ಕಾಟಿಪಳ್ಳ ಮತ್ತು ತಂಡದಿಂದ ಬುರ್ದಾ ಆಲಾಪನೆ ನಡೆಯಿತು. ಯಸ್ ಟೀಂ ಸದಸ್ಯರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಕಲಂದರ್ ಬಾವ ಉಸ್ತಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News