ಸುಪ್ರೀಂಕೋರ್ಟ್ ನ ಸದ್ಯದ ಸ್ಥಿತಿ ಘೋರ: ಮಾಜಿ ಮುಖ್ಯ ನ್ಯಾಯಾಧೀಶ ಲೋಧಾ ಕಳವಳ

Update: 2018-05-02 07:31 GMT

ಹೊಸದಿಲ್ಲಿ, ಮೇ 2: ಸುಪ್ರೀಂಕೋರ್ಟ್‍ನ ಸದ್ಯದ ಸ್ಥಿತಿ ಘೋರವಾಗಿದೆ ಎಂದು ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್‍ನ ಐವರು ನ್ಯಾಯಮೂರ್ತಿಗಳು, ಪ್ರಕರಣಗಳ ಹಂಚಿಕೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಬಹಿರಂಗವಾಗಿ ಸಿಜೆಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯನ್ನು 'ಘನಘೋರ' ಎಂದು ಬಣ್ಣಿಸಿದ ಅವರು, ಇದನ್ನು ಬಗೆಹರಿಸಲು ಸಂಘಟಿತ ನಾಯಕತ್ವ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಎಲ್ಲ ನ್ಯಾಯಮೂರ್ತಿಗಳನ್ನು ಜತೆಗೆ ಒಯ್ಯುವ ಮೂಲಕ ರಾಜತಾಂತ್ರಿಕತೆ ಪ್ರದರ್ಶಿಸಬೇಕು ಎಂದು ಅವರು ಸಿಜೆಐ ದೀಪಕ್ ಮಿಶ್ರಾ ಅವರಿಗೆ ಸಲಹೆ ಮಾಡಿದ್ದಾರೆ.

ಜ್ಯೇಷ್ಠತೆಯಲ್ಲಿ ಸಿಜೆಐ ಅತ್ಯುನ್ನತ ಎನ್ನುವುದು ನಿಸ್ಸಂದೇಹ. ಹಾಗೆಂದ ಮಾತ್ರಕ್ಕೆ ಅವರ ಇಚ್ಛಾನುಸಾರ ಅವರು ಮಾಡಲು ಸಾಧ್ಯವೇ?, ಪ್ರಕರಣಗಳ ಹಂಚಿಕೆ ನ್ಯಾಯಸಮ್ಮತವಾಗಿರಬೇಕು ಎಂದು ಸ್ಪಷ್ಟಪಡಿಸಿದರು. ಈ ಅಂಶಗಳನ್ನು ನ್ಯಾಯಮೂರ್ತಿ ಲೋಧಾ ಅವರು, ಹಿರಿಯ ಪತ್ರಕರ್ತ ಅರುಣ್ ಶೌರಿ ಅವರ ಅನಿತಾ ಗೆಟ್ಸ್ ಬೇಲ್ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News