ಪ್ಯಾರಿಸ್: ಮೇ ದಿನದ ಮೆರವಣಿಗೆ ವೇಳೆ ಹಿಂಸೆ; 300 ಬಂಧನ

Update: 2018-05-02 17:04 GMT

ಪ್ಯಾರಿಸ್, ಮೇ 2: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಮಧ್ಯ ಭಾಗದಲ್ಲಿ ಮಂಗಳವಾರ ನಡೆದ ಮೇ ದಿನಾಚರಣೆ ಮೆರವಣಿಗೆಯಲ್ಲಿ, ಮುಸುಕುಧಾರಿ ವ್ಯಕ್ತಿಗಳು ಮೆಕ್‌ಡೊನಾಲ್ಡ್ಸ್ ರೆಸ್ಟೋರಂಟ್ ಹಾಗೂ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಕಾರ್ಮಿಕ ಸುಧಾರಣೆಗಳ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು.

ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಸುಮಾರು 300 ಪ್ರತಿಭಟನಕಾರರನ್ನು ಬಂಧಿಸಿದ್ದಾರೆ.

 ‘ರೈಸ್ ಅಪ್ ಪ್ಯಾರಿಸ್ (ಎದ್ದೇಳು ಪ್ಯಾರಿಸ್)’ ಮತ್ತು ‘ಎವರಿವನ್ ಹೇಟ್ಸ್ ದ ಪೊಲೀಸ್ (ಪ್ರತಿಯೊಬ್ಬರೂ ಪೊಲೀಸರನ್ನು ದ್ವೇಷಿಸುತ್ತಾರೆ)’ ಎಂಬ ಘೋಷಣೆಗಳನ್ನು ಕೂಗುತ್ತಾ ಕಪ್ಪು ಜಾಕೆಟ್ ಮತ್ತು ಮುಸುಕುಗಳನ್ನು ಧರಿಸಿದ್ದ ಸುಮಾರು 1200 ಜನರು ಸಾಗುತ್ತಿದ್ದರು. ಅವರು ಕಾರ್ಮಿಕರ ಹಕ್ಕುಗಳಿಗಾಗಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಮೆರವಣಿಗೆಯನ್ನು ಸೇರಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರ ಗುಂಪೊಂದು ಪುಂಡಾಟಿಕೆ ನಡೆಸಿ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News