ಎಐಎಂಸಿಗೆ ದಾನಸಾರಿ ಅನುಸೂಯಾ ಪ್ರಧಾನ ಕಾರ್ಯದರ್ಶಿ ,ಫಾತಿಮಾ ರೋಸ್ನಾ ಕಾರ್ಯದರ್ಶಿ

Update: 2018-05-06 05:58 GMT

ಹೊಸದಿಲ್ಲಿ, ಮೇ 6: ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ (ಎಐಎಂಸಿ) ನೂತನ ಪ್ರಧಾನ ಕಾರ್ಯದರ್ಶಿಯಾಗಿ ತೆಲಂಗಾಣದ ಮಾಜಿ ಶಾಸಕಿ ದಾನಸಾರಿ ಅನುಸೂಯಾ ಮತ್ತು ಕಾರ್ಯದರ್ಶಿಯಾಗಿ ಫಾತಿಮಾ ರೋಸ್ನಾ ನೇಮಕಗೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅನುಸೂಯಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಫಾತಿಮಾ ರೋಸ್ನಾರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಾಗಿ ಎಐಸಿಸಿ  ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News